ದಿನಭವಿಷ್ಯ: ಗ್ರಹಗಳ ಸ್ಥಾನ ಬದಲಾವಣೆ, ಯಾವ ರಾಶಿಗೆ ಶುಭ?

ಮೇಷ
ಪ್ರೀತಿಪಾತ್ರರಿಗೆ ನೋವು ನೀಡಬೇಡಿ. ಮಾತಿನಲ್ಲಿ ನಯವಿರಲಿ. ಧನಲಾಭವಿದೆ. ಆದರೆ ಜೂಜಿನಂತಹ ಕಾರ್ಯಕ್ಕೆ ಎಳಸಬೇಡಿ.
ವೃಷಭ
ಇಂದು ದೇಹಾಲಸ್ಯ. ಕಾರ್ಯದಲ್ಲಿ   ಉದಾಸೀನ. ವೃತ್ತಿಯ ಒತ್ತಡವೂ ಕಡಿಮೆ. ಕೌಟುಂಬಿಕ ಸಮಸ್ಯೆಯೊಂದು ಮನಸ್ಸಿನ ನೆಮ್ಮದಿ ಕಸಿಯುವುದು.
ಮಿಥುನ
ಅನ್ಯರ ಒಳಿತಿಗಾಗಿ ನೀವು ಕೆಲಸ ಮಾಡುವಿರಿ. ಅದಕ್ಕಾಗಿ ಯಾವುದೇ ಹಂತಕ್ಕೆ ಏರಲು ತಯಾರು. ಆದರೆ ಇದೇವೇಳೆ ನಿಮ್ಮ ಹಿತಾಸಕ್ತಿ ಮರೆಯಬೇಡಿ.
ಕಟಕ
ಆರ್ಥಿಕ ಒತ್ತಡ. ಖರ್ಚೂ ಅಧಿಕ. ಸಕಾಲದಲ್ಲಿ ನೆರವು ಸಿಗದೆ ಅಸಹನೆ. ವದಂತಿ ಹರಡುವ ಬಂಧುಗಳನ್ನು ದೂರವಿಡಿ.
ಸಿಂಹ
ಆಹಾರ ಸೇವನೆ ಯಲ್ಲಿ ಎಚ್ಚರ ವಹಿಸಿ. ಹೊಟ್ಟೆ ಕೆಡುವ ಸಾಧ್ಯತೆ ಇದೆ. ವೃತ್ತಿ ಕ್ಷೇತ್ರದಲ್ಲಿ ಸಮಸ್ಯೆ ಎದುರಿಸುವಿರಿ. ಸಾಂಸಾರಿಕ ಕಲಹ.
ಕನ್ಯಾ
ಸಹೋದ್ಯೋಗಿಗಳ ಜತೆ ಹೆಚ್ಚು ಸಮನ್ವಯ ಅಗತ್ಯ. ಭಿನ್ನಮತ ಇದ್ದರೂ ಹೊಂದಾಣಿಕೆ ಸಾಧಿಸಿ. ಕೌಟುಂಬಿಕ ಬಿಕ್ಕಟ್ಟು ಪರಿಹಾರ.
ತುಲಾ
ಹೆಚ್ಚು ವಿಶೇಷ ಇಲ್ಲದ ಸಾಮಾನ್ಯ ದಿನ. ಆತ್ಮೀಯ ಸಂಬಂಧದಲ್ಲಿ ಬಿರುಕು ಉಂಟಾದೀತು. ಅದು ಬೆಳೆಯಲು ಅವಕಾಶ ಕೊಡಬೇಡಿ.
ವೃಶ್ಚಿಕ
ಗೊಂದಲದ ದಿನ. ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲಾಗದೆ ತೊಳಲಾಟ. ಇಷ್ಟವಿಲ್ಲದ ಕಾರ್ಯ ಮಾಡಬೇಕಾದ ಅನಿವಾರ್ಯತೆ.
ಧನು
ಮನೆಯಲ್ಲೂ ಕಚೇರಿಯಲ್ಲೂ ಹೊಣೆ ಹೆಚ್ಚಳ. ನೀವು ಹೇಳಿದ ಮಾತಿಗೆ ಕೆಲವರು ಕಿವಿ ಕೊಡಲಾರರು. ಅದರಿಂದ ಅಸಹನೆ ಹೆಚ್ಚು.
ಮಕರ
ಆರ್ಥಿಕ ಬಿಕ್ಕಟ್ಟು ಸಂಭವ. ಅಗತ್ಯ ಕಾರ್ಯಕ್ಕೆ ಹಣ ದೊರಕದೆ ಕಷ್ಟ. ವೃತ್ತಿಯಲ್ಲಿನ ಹೊಣೆಯೊಂದು ಹೆಗಲಿನಿಂದ ಜಾರಲಿದೆ.
ಕುಂಭ
ವೃತ್ತಿಯಲ್ಲಿ ತಾತ್ಕಾಲಿಕ ಏರುಪೇರು. ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಮತ್ತೆ ಎಲ್ಲವೂ ಸರಿಯಾಗುವುದು. ಕೌಟುಂಬಿಕ ಸಹಕಾರ.
ಮೀನ
ಚಿಂತೆಯೊಂದು ಪರಿಹಾರ. ಮನಸ್ಸಿಗೆ ನಿರಾಳತೆ. ಕೆಲಸದ ಒತ್ತಡವೂ ಇಲ್ಲ. ಹಾಗಾಗಿ  ನಿಮ್ಮ ಇಷ್ಟದ ಕಾರ್ಯ ನಡೆಸಲು ಸಕಾಲ.
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!