ದಿನಭವಿಷ್ಯ: ಫಲಪ್ರದ ದಿನ, ಹೊಸ ವ್ಯವಹಾರ ಆರಂಭ

ಮೇಷ
ಇಂದು ನಿಮ್ಮ ಚಿಂತನೆ, ಲೆಕ್ಕಾಚಾರಗಳು ಹೆಚ್ಚು ನಿಖರ ಹಾಗೂ ಸ್ಪಷ್ಟ. ಹಾಗಾಗಿ ಪ್ರತಿಯೊಂದು ಕೆಲಸ ಸರಿಯಾದ ಲೆಕ್ಕಾಚಾರದಲ್ಲಿ ನಿರ್ವಹಿಸುವಿರಿ.

ವೃಷಭ
ಇಂದು ಯಶಸ್ಸಿನ ಸಾಧ್ಯತೆ ಅಧಿಕ. ಹಾಗಾಗಿ ಯಾವುದೇ ಹೊಣೆ ಹೊರಲು ಹಿಂಜರಿಯಬೇಕಿಲ್ಲ. ಕೌಟುಂಬಿಕ ಒತ್ತಡ ನಿವಾರಣೆ.

ಮಿಥುನ
ಶಾಂತ ಮತ್ತು ನಿರಾಳ ಮನಸ್ಥಿತಿ. ಆದ್ದರಿಂದ ಪ್ರಮುಖ ನಿರ್ಧಾರ ತಾಳಲು ಮನಸ್ಸು ತಯಾರಾಗಿದೆ.ಸುಗಮ ಕಾರ್ಯದಿಂದ ಸಂತೃಪ್ತಿ, ಸಮಾಧಾನ.

ಕಟಕ
ದೊಡ್ಡ ನಿರ್ಧಾರ ತಾಳುವಲ್ಲಿ ಹಿಂಜರಿಕೆ ಬೇಕಿಲ್ಲ. ಯಶ ಖಂಡಿತ. ಆತ್ಮೀಯ ಸಂಬಂಧವು ಹೊಸ ಮಜಲು ತಲುಪಬಹುದು. ಆರ್ಥಿಕತೆ ಉತ್ತಮ.

ಸಿಂಹ
ವೃತ್ತಿಯಲ್ಲೂ ಖಾಸಗಿ ಬದುಕಲ್ಲೂ ಮಹತ್ವದ ಬದಲಾವಣೆ. ಉದ್ಯೋಗ ಅವಕಾಶ ಹೆಚ್ಚಳ. ಅನಿರೀಕ್ಷಿತ ಧನಲಾಭ. ಆರೋಗ್ಯ ಸಮಸ್ಯೆ ಪರಿಹಾರ.

ಕನ್ಯಾ
ಇಂದು ಹೆಚ್ಚುವರಿ ಹೊಣೆಗಾರಿಕೆ ನಿಮ್ಮ ಹೇಗಲೇರಲಿದೆ. ಅವಸರದಲ್ಲಿ ಕೆಲಸ ಮುಗಿಸಬೇಕಾದ ಅನಿವಾರ್ಯತೆ. ತಪ್ಪೆಸಗದಿರಿ.

ತುಲಾ
ನಿಮ್ಮ ಪ್ರಾಮಾಣಿಕ ವರ್ತನೆ ಎಲ್ಲರ ಮನ ಗೆಲ್ಲುವುದು. ಕೌಟುಂಬಿಕ ಬಿಕ್ಕಟ್ಟು ನಿವಾರಣೆಗೂ ಇದು ನೆರವಾಗುವುದು. ಆರ್ಥಿಕ ಒತ್ತಡ ತುಸು ಹೆಚ್ಚಬಹುದು.

ವೃಶ್ಚಿಕ
ಮುಖ್ಯ ಕೆಲಸ ಸಕಾಲದಲ್ಲಿ ಮುಗಿಯದೆ ಅಸಹನೆ,
ಅಸಂತೃಪ್ತಿ. ಕೆಲವರ ಕಿರಿಕಿರಿ ಕೂಡಾ ಇದಕ್ಕೆ ಕಾರಣವಾಗುವುದು. ಒಟ್ಟಿನಲ್ಲಿ ನಿಮಗಿಂದು ಮನಶ್ಯಾಂತಿ ದೂರ.

ಧನು
ಎಂದಿಗಿಂತ ಕಡಿಮೆ ಕೆಲಸ. ಹಾಗಾಗಿ ಒತ್ತಡದಿಂದ ವಿಮುಕ್ತಿ ಪಡೆಯುವಿರಿ. ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಅದಕ್ಕೆ ಪರಿಹಾರ ಕಾಣುವಿರಿ.

ಮಕರ
ನೀವಿಂದು ಕೆಲ ವಿಷಯಗಳಲ್ಲಿ ನಿರುತ್ಸಾಹ ತಾಳುವಂತಹ ಪ್ರಸಂಗ ಉಂಟಾದೀತು. ಬದಲಾದ ಮನಸ್ಥಿತಿಯೊಂದಿಗೆ ಕಾರ್ಯ ಎಸಗಿರಿ.

ಕುಂಭ
ಮುಖ್ಯ ವಿಷಯದಲ್ಲಿ ಇಂದು ನೀವೇ ನಿರ್ಣಾಯಕ ಪಾತ್ರ ವಹಿಸುವಿರಿ. ಮದುವೆಯ ಪ್ರಸ್ತಾಪ ಶುಭ ಸುದ್ದಿ ನೀಡುವುದು.

ಮೀನ
ಸಂಬಂಧದಲ್ಲಿ ತೀವ್ರ ವಾಗ್ವಾದ ನಡೆದೀತು. ನೀವು ಸಹನೆಯಿಂದ ವರ್ತಿಸುವುದು ಅವಶ್ಯ. ಆರೋಗ್ಯದ ಕಾಳಜಿ ಕಡೆಗಣಿಸದಿರಿ.  ಧನವ್ಯಯ ಹೆಚ್ಚು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!