ಹೆಡ್ ಕಾನ್‌ಸ್ಟೇಬಲ್ ನ ಕೈ ಕಚ್ಚಿ ಹಲ್ಲೆ ನಡೆಸಿದ ಆರೋಪಿ ಸೆರೆ

ಹೊಸದಿಗಂತ ವರದಿ,ಬೆಂಗಳೂರು:

ಹೆಲೈಟ್ ಧರಿಸದಿದ್ದಕ್ಕೆ ಪೋಟೋ ತೆಗೆಯಲು ಹೋಗಿದ್ದ ಸಂಚಾರ ಹೆಡ್ ಕಾನ್‌ಸ್ಟೇಬಲ್ ಕೈ ಹಿಡಿದು ಕಚ್ಚಿ ಹಲ್ಲೆ ಮಾಡಿದ್ದ ಆರೋಪಿಯನ್ನು ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಿಟಿಎಂ ಲೇಔಟ್‌ನ ನಿವಾಸಿ ಸೈಯದ್ ಸಫಿ(28) ಬಂಧಿತ. ಆರೋಪಿಯು ಸೋಮವಾರ ಬೆಳಗ್ಗೆ 11.30ರ ಸುಮಾರಿಗೆ ಡಾ. ಮರೀಗೌಡ ರಸ್ತೆಯ 10ನೇ ಅಡ್ಡರಸ್ತೆಯ ಜಂಕ್ಷನ್ ಬಳಿ ಹೆಡ್ ಕಾನ್‌ಸ್ಟೇಬಲ್ ಸಿದ್ರಾಮೇಶ್ವರ ಕೌಜಲಗಿ ಮತ್ತು ಲೋಕೆಶ್‌ರವರನ್ನು ಸುಗಮ ಸಂಚಾರ ನಿರ್ವಹಣೆಗೆ ನಿಯೋಜಿಸಿದ್ದರು. ಅದರಂತೆ ಕಾರ್ಯನಿರ್ವ ಹಿಸುತ್ತಿದ್ದ ಈ ಇಬ್ಬರ ಮೇಲೆ ಆರೋಪಿ ಸೈಯದ್ ಸಫಿ, ಅವಾಚ್ಯವಾಗಿ ನಿಂದಿಸಿ, ಬೆದರಿಕೆಯೊಡ್ಡಿ ಕೈ ಬೆರಳುಗಳಿಗೆ ಹಲ್ಲಿನಿಂದ ಕಚ್ಚಿ ಗಾಯ ಮಾಡಿದ್ದಾನೆ. ಕರ್ತ ವ್ಯಕ್ಕೆ ಲೋಪವೆಸಗಿದ್ದರಿಂದ ಹಾಗೂ ಹಲ್ಲೆ ನಡೆಸಿರುವ ಆರೋಪದಡಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಲೈಟ್ ಧರಿಸದೆ ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಬರುತ್ತಿರುವಾಗ ಜಂಕ್ಷನ್‌ನಲ್ಲಿದ್ದ ಹೆಡ್‌ ಕಾನ್ಸ್ಬಲ್ ಸಿದ್ರಾಮೇಶ್ವರ ಅವರು ದ್ವಿಚಕ್ರ ಸವಾರನ ವಿರುದ್ಧ ಪ್ರಕರಣ ದಾಖಲಿಸಲು, ತಮ್ಮ ಮೊಬೈಲ್ ತೆಗೆದು ಪೋಟೋ ಕ್ಲಿಕ್ಕಿಸಲು ಮುಂದಾದಾಗ ಆರೋಪಿಯು ನನ್ನ ಪೋಟೋ ಏಕೆ ತೆಗೆಯುತ್ತಿದ್ದೀಯಾ? ಎಷ್ಟು ಪ್ರಕರಣ ಬೇಕಾದರೂ ಹಾಕೆಂದು ಹೇಳಿ, ಸಿದ್ರಾಮೇಶ್ವರ ಅವರ ಕೈಯಲ್ಲಿದ್ದ ಮೊಬೈಲ್‌ನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸುವಾಗ ಪಕ್ಕದಲ್ಲಿದ್ದ ಇತರೆ ಸಿಬ್ಬಂದಿ, ಆತನನ್ನು ತಡೆದು ದ್ವಿಚಕ್ರ ವಾಹನ ಸಹಿತ ರಸ್ತೆ ಬದಿಯಲ್ಲಿ ನಿಲ್ಲಿಸಿದಾಗ ಜೋರಾಗಿ ಕೂಗಾಡಿದ್ದಲ್ಲದೇ, ಕರ್ತವ್ಯದಲ್ಲಿದ್ದ ಸಿಬ್ಬಂದಿ ವಿರುದ್ಧ ಏಕಾಏಕಿ ಜಗಳಕ್ಕಿಳಿದು ಅವಾಚ್ಯ ಶಬ್ದದಿಂದ ನಿಂದಿಸಿದ್ದಾನೆ. ಬಳಿಕ ವಿಲ್ಸನ್ ಗಾರ್ಡನ್ ಅಂಬ್ರಲಾ(ಕಿಯಾಸ್ಕ್)ಗೆ ಬೆಂಕಿ ಹಚ್ಚುತ್ತೇನೆಂದು ಬೆದರಿಸಿ, ಸಿದ್ರಾಮೇಶ್ವರ ಅವರ ಎಡಗೈ ಬೆರಳಿಗಳಿಗೆ ಹಲ್ಲಿನಿಂದ ತೀವ್ರವಾಗಿ ಕಚ್ಚಿಗಾಯಮಾಡಿದ್ದಾನೆ. ನಂತರ ಪೊಲೀಸರು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಕರೆತಂದು ಆತನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!