ಮೇಷ
ಇತರರ ಟೀಕೆಗೆ ಗುರಿಯಾಗುವಂತೆ ವರ್ತಿಸಬೇಡಿ. ಪ್ರಾಮಾಣಿಕವಾಗಿರಿ. ಸಂಬಂಧದಲ್ಲಿ ಮೂಡಿದ ಬಿರುಕು ಶಮನ, ಎಲ್ಲವೂ ಸುಲಲಿತ.
ವೃಷಭ
ವೃತ್ತಿ ಕ್ಷೇತ್ರದಲ್ಲಿ ಎಲ್ಲವೂ ಸುಗಮವಾಗಿ ಸಾಗುವುದು. ಯಾವುದೇ ಅಡ್ಡಿ ಆತಂಕ ಬಾಧಿಸದು. ಆರ್ಥಿಕ ಬಿಕ್ಕಟ್ಟು ಬಾಧಿಸಿದರೂ ಸೂಕ್ತ ನೆರವು ಲಭ್ಯ.
ಮಿಥುನ
ನಿಮ್ಮ ನಿಲುವಿನಲ್ಲಿ ಭಾರೀ ಬದಲಾವಣೆ ತರಲು ಹೋಗದಿರಿ. ಪ್ರೀತಿಯ ವಿಷಯದಿಂದ ಏಕಾಗ್ರತೆ ನಾಶ. ಕಹಿಸತ್ಯವು ಗೋಚರಿಸಬಹುದು. ವೆಚ್ಚ ಅಧಿಕ ಸಂಭವ.
ಕಟಕ
ಖಾಸಗಿ ಚಿಂತೆಗಳು ಬಾಧಿಸುತ್ತವೆ. ಕಲ್ಪನೆಯಲ್ಲೆ ಕೊರಗದಿರಿ. ವಾಸ್ತವ ಏನೆಂದು ಅರಿತು ವ್ಯವಹರಿಸಿ. ಭಾವನೆಗೆ ಕುರುಡಾಗಿ ಬಲಿಯಾಗದಿರಿ.
ಸಿಂಹ
ಹೊಸ ಸಾಹಸಕ್ಕೆ ಮುಂದಾಗುವುದಕ್ಕಿಂತ ತಿಳಿದಿರುವ ಕ್ಷೇತ್ರದಲ್ಲೆ ವ್ಯವಹರಿಸುವುದು ಒಳಿತು. ಪ್ರೇಮದ ವಿಚಾರದಲ್ಲಿ ಪ್ರಮುಖ ಬೆಳವಣಿಗೆ ನಡೆದೀತು.
ಕನ್ಯಾ
ಪ್ರೀತಿಯ ಆಕರ್ಷಣೆಯಿಂದ ಮನಸ್ಸು ದುರ್ಬಲ. ಮನಸ್ಸು ದೃಢಗೊಳಿಸಿ. ವಾಸ್ತವತೆಯನ್ನು ಅರಿಯಲು ಪ್ರಯತ್ನಿಸಿ. ಕಾಯುವಿಕೆ ಒಳಿತು.
ತುಲಾ
ಕೆಲವು ಆಮಿಷಗಳು ನಿಮ್ಮ ದಾರಿ ತಪ್ಪಿಸಬಹುದು. ಅದಕ್ಕೆ ಬಲಿಯಾಗದಿರಿ. ಮನಸ್ಸಿನಲ್ಲಿ ತುಮುಲ. ಆಪ್ತರೊಡನೆ ಮನಸ್ತಾಪ ಉಂಟಾಗಬಹುದು.
ವೃಶ್ಚಿಕ
ನಿಮ್ಮ ಕಾರ್ಯಕ್ಕೆ ಇಂದು ವಿಘ್ನ ತಲೆದೋರೀತು. ಸಮಾಧಾನದಿಂದ ವ್ಯವಹರಿಸಿ. ದುಡುಕಿನ ನಿರ್ಧಾರ ತಾಳದಿರಿ. ಮನೆಯಲ್ಲಿ ಸಣ್ಣ ವಿಷಯಕ್ಕೆ ಕಲಹ ಸಂಭವ.
ಧನು
ನೀವಿಂದು ಯಾರ ಜತೆಗೂ ಬೆರೆಯದೆ ಏಕಾಂಗಿಯಾಗಿರಲು ಬಯಸುವಿರಿ. ಮನದೊಳಗಿನ ತುಮುಲಗಳು ಅದಕ್ಕೆ ಕಾರಣ.
ಮಕರ
ಪ್ರಮುಖ ವ್ಯವಹಾರ ಎಚ್ಚರದಿಂದ ನಿಭಾಯಿಸಬೇಕು. ಅಸಹನೆ, ಒತ್ತಡ ಅಧಿಕ. ಇತರರ ಮೇಲೆ ರೇಗಿ ಮನಸ್ಸು ಹಾಳು ಮಾಡಿಕೊಳ್ಳದಿರಿ.
ಕುಂಭ
ಸಮಸ್ಯೆಗೆ ಇನ್ನೂ ಪರಿಹಾರ ಕಾಣದೆ ಚಿಂತೆ. ನಿಮಗೆ ಕಿರಿಕಿರಿ ತರುವ ವ್ಯಕ್ತಿಗಳಿಂದ ದೂರವಿರಿ. ಖಾಸಗಿ ಸಂಬಂಧದ ಕುರಿತು ಗೊಂದಲ, ಭಾವನಾತ್ಮಕ ಸಂಘರ್ಷ.
ಮೀನ
ಇಂದಿನ ದಿನ ನಿಮಗೆ ಅನುಕೂಲಕರ. ಆಪ್ತರ ಸಲಹೆಗಳು ನಿಮಗೆ ಒಳಿತು ತರಲಿವೆ. ಮನೆಯಲ್ಲಿ ಮೂಡಿದ್ದ ಅಶಾಂತ ಪರಿಸ್ಥಿತಿ ನಿವಾರಣೆ.