ಮೇಷ
ಮಾನಸಿಕ ನಿರಾಳತೆ ದೂರ. ಐಷಾರಾಮಿ ವಸ್ತುಗಳಿಗೆ ಮನಸ್ಸು ತುಡಿಯಬಹುದು. ಅದನ್ನು ಪಡೆಯಲಾಗದ ಕೊರಗು ಕೂಡಾ ಕಾಡಬಹುದು.
ವೃಷಭ
ಉದಾಸೀನತೆ ಕಾಡುವುದು. ಕೆಲಸದಲ್ಲಿ ನಿರಾಸಕ್ತಿ. ಆದರೆ ನಿಮ್ಮ ಧ್ಯೇಯಕ್ಕೆ ಕುಂದು ಬಾರದಿರಲಿ. ಆರೋಗ್ಯ ಸಮಸ್ಯೆ ನಿವಾರಣೆ, ಸ್ವಾಸ್ಥ ಹೆಚ್ಚಳ.
ಮಿಥುನ
ಪ್ರಯಾಣದ ಯೋಜನೆ ತಲೆಕೆಳಗಾದೀತು. ಏರುಪೇರಿನ ಪರಿಸ್ಥಿತಿ. ನಿಮ್ಮ ಸಹನೆ ಕಳಕೊಳ್ಳದಿರಿ. ಎಲ್ಲರ ಜತೆ ಸೌಹಾರ್ದದಿಂದ ವ್ಯವಹರಿಸಿ.
ಕಟಕ
ಖರ್ಚು ಅಧಿಕ. ಹಾಗಾಗಿ ನಿಮ್ಮ ಖರೀದಿಯ ಉತ್ಸಾಹ ನಿಯಂತ್ರಿಸಿ.ಆರೋಗ್ಯದ ಕುರಿತು ಹೆಚ್ಚಿನ ಕಾಳಜಿ ಅವಶ್ಯ. ಆಹಾರ ಹಿತಮಿತ ಆಗಿರಲಿ.
ಸಿಂಹ
ವೃತ್ತಿಯಲ್ಲಿ ಏಕಾಗ್ರತೆ ಮೂಡದು. ನಿಮ್ಮದೇ ಆದ ಸಮಸ್ಯೆಗಳು ಮನಸ್ಸನ್ನು ಕೊರೆಯು ತ್ತಿರುತ್ತದೆ. ಕಾನೂನು ತೊಡಕಿನಿಂದ ದೂರವಿರಿ. ಬಂಧುಗಳ ಸಹಕಾರ.
ಕನ್ಯಾ
ಕೆಲವು ಸಮಸ್ಯೆ ಉದ್ವಿಗ್ನತೆ ಸೃಷ್ಟಿಸಲಿದೆ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಯಾರದೂ ನಿಷ್ಠುರ ಕಟ್ಟಿಕೊಳ್ಳಲು ಹೋಗಬೇಡಿ. ಹೊಂದಾಣಿಕೆ ಒಳ್ಳೆಯದು.
ತುಲಾ
ಆರ್ಥಿಕ ಸಮಸ್ಯೆ ಕಾಡುವುದು. ನಿಮ್ಮ ಸುತ್ತ ಇರುವ ನಯವಂಚಕರ ಕುರಿತು ಎಚ್ಚರವಿರಲಿ. ಅವರ ನಯಮಾತಿಗೆ ಮರುಳಾಗದಿರಿ. ನಿಮ್ಮ ಎಚ್ಚರಿಕೆಯಲ್ಲಿರಿ.
ವೃಶ್ಚಿಕ
ಇತರರ ಚಾಡಿ ಮಾತುಗಳನ್ನೆಲ್ಲ ನಂಬಲು ಹೋಗದಿರಿ. ಅದರಿಂದ ನಿಮ್ಮ ಕುಟಂಬ ಜೀವನ ಹಾಳಾದೀತು. ಯಾರನ್ನೂ ಅತಿಯಾಗಿ ನಂಬಲು ಹೋಗಬೇಡಿ.
ಧನು
ಕಚೇರಿ ಅಥವಾ ಮನೆಯಲ್ಲಿ ಉದ್ವಿಗ್ನ ವಾತಾವರಣ. ಆದರೆ ಇಂತಹ ಪರಿಸ್ಥಿತಿ ನಿಮಗೆ ಹೊಸದಲ್ಲ.ಅದನ್ನು ನಿಭಾಯಿಸುವ ಕಲೆ ನಿಮಗೆ ಅರಿವಿದೆ.
ಮಕರ
ಆಪ್ತರ ಜತೆಗೇ ಮುನಿಸು ಉಂಟಾದೀತು. ಅವರ ಜತೆ ಸಹನೆಯಿಂದ ವ್ಯವಹರಿಸಿರಿ. ನಿಮ್ಮ ಆರ್ಥಿಕ ವ್ಯವಹಾರದಲ್ಲಿ ಸಮಸ್ಯೆಉಂಟಾದೀತು. ಧನವ್ಯಯ ಸಂಭವ.
ಕುಂಭ
ನಿಮ್ಮ ಪಾಲಿಗೆ ಇಂದು ಪ್ರತಿಕೂಲ ಬೆಳವಣಿಗೆ ಸಂಭವಿಸುವುದು. ಅದನ್ನು ದಿಟ್ಟವಾಗಿ ಎದುರಿಸಿ. ಹಿತಾಸಕ್ತಿ ಬಲಿಗೊಟ್ಟು ರಾಜಿಗೆ ಇಳಿಯದಿರಿ.
ಮೀನ
ನಿಮ್ಮ ತಿನಿಸಿನ ಕುರಿತು ಎಚ್ಚರ ವಹಿಸಿ. ಹೊಟ್ಟೆ ಕೆಡುವ ಪ್ರಸಂಗ ಒದಗೀತು.ಮನೆಯಲ್ಲಿ ವಾಗ್ವಾದ ತಪ್ಪಿಸಿರಿ.ಎಲ್ಲರ ಜತೆ ಹೊಂದಾಣಿಕೆ ಮುಖ್ಯ.