ದಿನಭವಿಷ್ಯ: ಬುಧ-ರಾಹು ಯೋಗ, ರಾಶಿಗಳ ಮೇಲೆ ಹೇಗಿರಲಿದೆ ಪ್ರಭಾವ?

ಮೇಷ
ನಿಮಗಿಂದು ಉತ್ಸಾಹದ ದಿನ. ಪ್ರಮುಖ ಕೆಲಸ ಸಫಲವಾದ ಸಂತೋಷ. ಕೌಟುಂಬಿಕ ಬಿಕ್ಕಟ್ಟು, ಮನಸ್ತಾಪ ನಿವಾರಣೆ. ಆತ್ಮೀಯರ ಭೇಟಿ, ಮಾತುಕತೆ.

ವೃಷಭ
ನಿಮ್ಮ ಬದುಕಿನಲ್ಲಿ ಹೊಸ ಅಧ್ಯಾಯ ಶುರು ಆಗಬಹುದು. ಕಹಿಯನಿಸುವ ಹಳೆಯ ವಿಷಯವನ್ನು ಮರೆತುಬಿಡಿ. ಭವಿಷ್ಯಕ್ಕೆ ಆದ್ಯತೆ ಕೊಡಿ.

ಮಿಥುನ
ನಿಮ್ಮ ಆಪ್ತವಲಯದ ವ್ಯಕ್ತಿಯೊಬ್ಬರು ನಿಮ್ಮ ಜತೆ ಇಂದು ನಿಷ್ಟುರವಾಗಿ ವರ್ತಿಸಬಹುದು. ನಿಮ್ಮ ಮಾನಸಿಕ ಶಾಂತಿಯನ್ನು ಅದು ಕದಡಬಹುದು. ಸಹನೆ ಇರಲಿ.

ಕಟಕ
ನಿಮ್ಮ ಕಠಿಣ ಶ್ರಮಕ್ಕೆ ಸೂಕ್ತ ಫಲ ಇಂದು ದೊರಕುವುದು. ಹಣದ ವಿಷಯದಲ್ಲಿ ನಿಮಗೆ ಪೂರಕವಾದ ಬೆಳವಣಿಗೆ. ಆಪ್ತರ ಜತೆಗೆ ಮುನಿಸು ಶಮನ.

ಸಿಂಹ
ಕೌಟುಂಬಿಕ ವಿಷಯದಲ್ಲಿ ಸಮಸ್ಯೆ ಎದುರಿಸುವಿರಿ. ಕೆಲವರ ವರ್ತನೆ ಅದಕ್ಕೆ ಕಾರಣವಾಗುವುದು. ಸಮಸ್ಯೆ ನಿವಾರಣೆಗೆ ನಿಮ್ಮಲ್ಲೇ ದಾರಿಯಿದೆ.

ಕನ್ಯಾ
ವಿವಿಧ ವಿಷಯಗಳಲ್ಲಿ ಇಂದು ವ್ಯಸ್ತರಾಗುವಿರಿ. ಹಾಗಾಗಿ ಕೆಲವು ಮುಖ್ಯ ವಿಷಯಗಳಿಗೆ ಗಮನ ಕೊಡಲು ಸಾಧ್ಯವಾಗದು. ಅವುಗಳನ್ನು ಕೂಡಾ ಕಡೆಗಣಿಸದಿರಿ.

ತುಲಾ
ನಿಮ್ಮ ಮನಸ್ಥಿತಿಯಲ್ಲಿ ಏರುಪೇರಾಗಬಹುದು. ಸಾಧ್ಯವಾದಷ್ಟು ಸಂತೋಷದಿಂದ ಇರಲು ಯತ್ನಿಸಿ. ಸಣ್ಣ ವಿಷಯ ಮನಸ್ಸು ಕಲಕಲು ಆಸ್ಪದ ಕೊಡದಿರಿ.

ವೃಶ್ಚಿಕ
ವೃತ್ತಿ ಅಥವಾ ಖಾಸಗಿ ಬದುಕಲ್ಲಿ ಸವಾಲಿಗೆ ಅಂಜಿ ಓಡದಿರಿ. ಅದನ್ನು ಧೈರ್ಯದಿಂದ ಎದುರಿಸಿ. ಯಶಸ್ಸು ನಿಮ್ಮದಾಗಲಿದೆ. ಸೂಕ್ತ ಸಹಾಯವೂ ದೊರಕುವುದು.

ಧನು
ಖಾಸಗಿ ಸಮಸ್ಯೆ ಪರಿಹರಿಸಲು ಆದ್ಯತೆ ಕೊಡಿ. ಸಣ್ಣದೆಂದು ಭಾವಿಸಿದ ಸಮಸ್ಯೆ ದೊಡ್ಡದಾದೀತು. ಅದಕ್ಕೆ ಅವಕಾಶ ಕೊಡದಿರಿ. ಕೌಟುಂಬಿಕ ಅಸಹಕಾರ.

ಮಕರ
ಇತರರಿಗೆ ಸಂಬಂಧಿಸಿದ ವಿಷಯವೊಂದು ನಿಮ್ಮ ಮನಸ್ಸನ್ನು ಕೊರೆಯುವುದು. ಅದನ್ನು ಸರಿಯಾಗಿ ಇತ್ಯರ್ಥ ಪಡಿಸಲು ಸಮಯ ವಿನಿಯೋಗಿಸಿ.

ಕುಂಭ
ನಿಮ್ಮ ಸಮಸ್ಯೆ ಪರಿಹಾರಕ್ಕೆ ಹಲವರಿಂದ ಸಲಹೆ ಕೇಳಿಬಂದೀತು. ಅವುಗಳಿಗೆ ಕಿವಿಗೊಡಿ. ಅನಿರೀಕ್ಷಿತ ಬೆಳವಣಿಗೆ ನಿಮ್ಮ ಪಾಲಿಗೆ ವರವಾಗಬಹುದು.

ಮೀನ
ಒತ್ತಡ, ಉದ್ವಿಗ್ನತೆ ಇಂದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರುವುದು. ಪ್ರೀತಿಯಲ್ಲಿ ವೈಫಲ್ಯಕಾಣುವಿರಿ. ಆಪ್ತರ ಸಾಂತ್ವನಕ್ಕಾಗಿ ಹಾತೊರೆಯುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!