ದಿನಭವಿಷ್ಯ: ಕೈಗೊಳ್ಳುವ ಕೆಲಸಕಾರ್ಯಗಳಲ್ಲಿ ಅಡಚಣೆ, ಯಾವ ರಾಶಿಗೆ ಶುಭ, ಅಶುಭ?

ಮೇಷ
ಕುಟುಂಬ ಸದಸ್ಯರ ಜತೆ ವಾಗ್ವಾದ ಉಂಟಾದೀತು. ಆದರೆ ಅದು ಉಲ್ಬಣಕ್ಕೆ ಹೋಗದು. ಬಂಧುಗಳ ಭೇಟಿ. ಖರ್ಚು ಹೆಚ್ಚಳ ಚಿಂತೆಗೆ ಕಾರಣ.

ವೃಷಭ
ಭಾವನೆ ಮತ್ತು ತರ್ಕದ ಮಧ್ಯೆ ಸಮತೋಲನ ಕಂಡುಕೊಳ್ಳಿ. ಭಾವನಾತ್ಮಕ ಏರುಪೇರು ನಿಭಾಯಿಸಿ. ಸಣ್ಣ ವಿಷಯಕ್ಕೂ ಬೇಸರ ಮಾಡದಿರಿ.

ಮಿಥುನ
ಆತ್ಮೀಯರೊಬ್ಬರ ಆರೋಗ್ಯ ಚಿಂತೆಗೆ ಕಾರಣವಾದೀತು. ಆದರೆ ಬಳಿಕ ಈ ಚಿಂತೆ ಪರಿಹಾರ ಕಾಣುವುದು. ಖರ್ಚುವೆಚ್ಚಗಳು ಇಂದು ಅಧಿಕ.

ಕಟಕ
ಉತ್ತಮ ಕಾರ್ಯ
ದಿಂದ ನಿಮ್ಮ ಸುತ್ತಲಿನ ಜನರ ಮೆಚ್ಚುಗೆ ಪಡೆಯುವಿರಿ. ಹಣಕಾಸು ಲಾಭ ಉಂಟಾದೀತು. ಆರೋಗ್ಯ ಸುಧಾರಣೆ.

ಸಿಂಹ
ಯಾವುದೇ ಕಾರ್ಯ ದಲ್ಲಿ ಇಂದು ನಿಮಗೆ ಗೆಲುವು ನಿಶ್ಚಿತ. ವಿರೋಧಗಳು ನಿಮ್ಮನ್ನು ಕಾಡಲಾರವು. ಆರ್ಥಿಕವಾಗಿ ಲಾಭ. ಕೌಟುಂಬಿಕ ನೆಮ್ಮದಿ.

ಕನ್ಯಾ
ವಿವೇಕಕ್ಕಿಂತಲೂ ಭಾವನೆಗೆ ಇಂದು ಹೆಚ್ಚು ಆದ್ಯತೆ ಕೊಡುವಿರಿ. ಇದರಿಂದ ಮನಸ್ಸಿಗೆ ನೋವು ಉಂಟಾದೀತು. ಆಪ್ತರ ವರ್ತನೆಯಿಂದ ಬೇಸರ ಸಂಭವ.

ತುಲಾ
ನಿಮ್ಮ ಮಹತ್ವಾಕಾಂಕ್ಷೆ ಈಡೇರುವ ಸಂಕೇತ ತೋರುವುದು. ಅದಕ್ಕೆ ಪೂರಕವಾದ ಕಾರ್ಯ ಮಾಡಿರಿ. ನಿಮ್ಮ ಸಾಧನೆ ಇತರರಿಂದ ಮೆಚ್ಚುಗೆ ಪಡೆಯುವುದು.

ವೃಶ್ಚಿಕ
ಇಂದು ನಿಮ್ಮ ಸಂವಹನ ಸಾಮರ್ಥ್ಯದಿಂದಲೇ ಕೆಲಸ ಸಾಧಿಸುವಿರಿ. ಎಲ್ಲರೊಂದಿಗೆ ಉತ್ತಮವಾಗಿ ಮಾತನಾಡುವ ನಿಮ್ಮ ಕಲೆ ನೆರವಿಗೆ ಬರಲಿದೆ.

ಧನು
ಯಾವುದೇ ವಿಚಾರದಲ್ಲಿ ಆತುರದಿಂದ ವರ್ತಿಸುವುದು ಸಲ್ಲದು. ಅದು ಹಿನ್ನಡೆಯನ್ನೆ ಉಂಟು ಮಾಡುವುದು. ಸರಿಯಾಗಿ ಯೋಚಿಸಿ ಕಾರ್ಯವೆಸಗಿ.

ಮಕರ
ಸಮಸ್ಯೆ , ಕಷ್ಟಗಳು ಕಾಡಿದರೂ ಎದೆಗುಂದದಿರಿ. ಅದನ್ನು ಎದುರಿಸುವ ಧೈರ್ಯ ತೋರಿ. ದಿನದಂತ್ಯಕ್ಕೆ ಎಲ್ಲವೂ ನಿಮ್ಮ ಪರವಾಗಿ ಆಗುವುದು.

ಕುಂಭ
ಹಿರಿಯರಿಂದ ನಿಮಗೆ ಇಂದು ಲಾಭವಿದೆ. ಅವರ ಮಾತು ಕೇಳಿರಿ. ಕಾನೂನು ಸಂಘರ್ಷದಲ್ಲಿ ತೊಡಗಿದ್ದರೆ ಇಂದು ಹಿನ್ನಡೆ ಸಂಭವ.

ಮೀನ
ನಿಮ್ಮ ಖಾಸಗಿ ವಸ್ತುಗಳ ಬಗ್ಗೆ ಅತಿಯಾದ ಮೋಹ ತೋರುವಿರಿ. ನಿಮ್ಮ ಆಪ್ತರ ಜತೆಗೆ ಇತರರ ಗೆಳೆತನ ಸಹಿಸಲಾರಿರಿ. ಅಸೂಯೆ ನಿಮ್ಮಲ್ಲಿ ಮೊಳೆಯಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!