ದಿನ ಭವಿಷ್ಯ: ಎಲ್ಲವನ್ನೂ ಅತಿಯಾಗಿ ಮಾಡುವುದು ನಿಮ್ಮ ಸ್ವಭಾವ, ಸ್ವಲ್ಪ ಮಿತಿ ಹೇರುವುದು ಒಳಿತು

ಶನಿವಾರ, 25 ಮಾರ್ಚ್ 2023, ಮಂಗಳೂರು

ಮೇಷ
ಕುಟುಂಬ ಸದಸ್ಯರ ಜತೆ ಭಿನ್ನಾಭಿಪ್ರಾಯ ಹುಟ್ಟಬಹುದು. ಸಹನೆ ಕಳಕೊಂಡು ವರ್ತಿಸದಿರಿ. ಹಣದ ಮುಗ್ಗಟ್ಟು ಕಾಡಬಹುದು.

ವೃಷಭ
ಸಣ್ಣ ವಿಷಯಗಳಿಗೆ ಹೆಚ್ಚೆಚ್ಚು ಚಿಂತಿಸುವಿರಿ. ಅತಿಯಾದ ನಿರೀಕ್ಷೆ ಒಳಿತಲ್ಲ. ಇದ್ದುದರಲ್ಲೆ ಸಂತೋಷ ಕಾಣಲು ಯತ್ನಿಸಿ. ಇತರರನ್ನು ಅನುಕರಿಸಬೇಡಿ.

ಮಿಥುನ
ಇಂದು ನಿಮ್ಮ ಅತಿ ಉತ್ಸಾಹವು ನಿರುತ್ಸಾಹಕ್ಕೆ ಬದಲಾಗಲೂಬಹುದು.  ಕೆಲವರ ವರ್ತನೆ ನಿರಾಶೆ ತರುವುದು. ಅವರ ಮೇಲೆ ಅವಲಂಬನೆ ಬಿಟ್ಟುಬಿಡಿರಿ.

ಕಟಕ
ಖಾಸಗಿ ಬದುಕಿನಲ್ಲಿ ಹೆಚ್ಚು ಹೊಣೆಗಾರಿಕೆ. ಇತರರನ್ನು ಸಂತೋಷಪಡಿಸಲು ನಿಮ್ಮ ಶ್ರಮ ಹಾಕುವಿರಿ. ಸಂಜೆ ವೇಳೆಗೆ ಉತ್ಸಾಹಭಂಗ.

ಸಿಂಹ
ಎಲ್ಲವನ್ನೂ ಅತಿಯಾಗಿ ಮಾಡುವುದು ನಿಮ್ಮ ಸ್ವಭಾವ. ಸ್ವಲ್ಪ ಮಿತಿ ಹೇರುವುದು ಒಳಿತು. ದೂರಸಂಬಂಧದಲ್ಲಿ ಒಡಕು ಮೂಡೀತು. ತಾಳ್ಮೆಯಿರಲಿ.

ಕನ್ಯಾ
ಭಾವುಕ ವಿಷಯದಲ್ಲಿ ಅತಿರೇಕದಿಂದ ವರ್ತಿಸುವ ಸಂಭವ. ಇದರಿಂದ ಇತರರ ಮನಸ್ಸಿಗೂ ನೋವು ತರುವಿರಿ. ಸಂಯಮ ಒಳ್ಳೆಯದು.

ತುಲಾ
ಕೆಲಸದಲ್ಲಿ ಯಶಸ್ಸು. ಹೊಸ ವ್ಯವಹಾರಕ್ಕೆ ಕಾಲ ಪಕ್ವವಿದೆ. ಆದರೆ ಯಾರ ಜತೆಗೂ ವಿವಾದಕ್ಕೆ  ಮುಂದಾಗದಿರಿ.ಅದರಿಂದ ನಿಮ್ಮ ನೆಮ್ಮದಿ ಹಾಳಾದೀತು.

ವೃಶ್ಚಿಕ
ಭವಿಷ್ಯದ ಬಗ್ಗೆ ಚಿಂತಿಸುತ್ತಾ ಕೂರಬೇಡಿ. ವರ್ತಮಾನವನ್ನು ಸುಂದರಗೊಳಿಸಲು ಯತ್ನಿಸಿ. ಆಪ್ತೇಷ್ಠರ ಜತೆ ಸಂತೋಷದ ಕಾಲಕ್ಷೇಪ. ಮಿತ್ರರ ಭೇಟಿ.

ಧನು
ಯಾವುದೇ ಕಾರ್ಯವಾದರೂ ನೀವಿಂದು ಗೆಲುವಿನ ಹಾದಿ ಹಿಡಿಯುವಿರಿ.ದೊಡ್ಡ ಸವಾಲನ್ನು ಎದುರಿಸಲು ಹಿಂಜರಿಕೆ ಬೇಡ.

ಮಕರ
ಖಾಸಗಿ ಬದುಕಿನಲ್ಲಿ ಸಂತೋಷದ ಬೆಳವಣಿಗೆ. ನಿಮಗೆ ಪೂರಕವಾದ ಬೆಳವಣಿಗೆ. ಬಂಧುಮಿತ್ರರ ಭೇಟಿ. ಹಣ ಹೆಚ್ಚು ಖರ್ಚಾಗಬಹುದು.

ಕುಂಭ
ಅಲ್ಪಾವಧಿ ಗುರಿ ಈಡೇರಿಸುವಿರಿ. ಕೆಲಸದ ಒತ್ತಡ ಹೆಚ್ಚಿದರೂ ನಿಮಗಿಂದು ಭಾರವೆನಿಸದು. ಅಧಿಕ ವ್ಯಯವಾದರೂ, ಸಂತೋಷ ಪಡುವಿರಿ

ಮೀನ
ಹೆಚ್ಚು ಉತ್ಸಾಹದ ದಿನ. ನಿಮ್ಮ ಕ್ರಿಯಾಶೀಲತೆ ಉತ್ತಮ ಫಲ ನೀಡುವುದು. ಅದರ ನಡುವೆಯೇ ಟೀಕೆಯನ್ನೂ ಎದುರಿಸುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!