Monday, March 4, 2024

ದಿನಭವಿಷ್ಯ: ಇಂದು ಈ ರಾಶಿಗೆ ಅಕ್ಷಯ ಪುಣ್ಯ ಪ್ರಾಪ್ತಿ

ಮೇಷ
ಬೆಳಗ್ಗೆಯೆ ಎಲ್ಲಾ ಕೆಲಸ ಮುಗಿಸಿಕೊಳ್ಳಿ. ಬಳಿಕ ನಿಮಗೆ ಸಮಯ ಸಿಗಲಾರದು. ಏಕಾಗ್ರತೆ ಕೆಡಿಸುವಂತಹ ಸನ್ನಿವೇಶ ಎದುರಾದೀತು. ಸಹನೆಯಿಂದಿರಿ.

ವೃಷಭ
ಅನುಕೂಲಕರ ದಿನ. ನಿರ್ಧಾರಗಳು ಉತ್ತಮ ಫಲ ನೀಡುತ್ತವೆ. ದಾಂಪತ್ಯದಲ್ಲಿ  ಸಂತೋಷ.  ಸ್ವಂತ ಉದ್ಯಮಿಗಳಿಗೆ ಧನಲಾಭ.

ಮಿಥುನ
ಸಹೋದ್ಯೋಗಿಗಳು  ನಿಮ್ಮ ವಿರುದ್ಧವಾಗಿ ವರ್ತಿಸಿಯಾರು. ತಕ್ಷಣಕ್ಕೆ ಪ್ರತಿಕ್ರಿಯಿಸದಿರಿ. ಆಲೋಚಿಸಿ ಕ್ರಮ ತೆಗೆದುಕೊಳ್ಳಿ. ಸಾಂಸಾರಿಕ ನೆಮ್ಮದಿ.

ಕಟಕ
ವೃತ್ತಿಯಲ್ಲಿ ತೃಪ್ತಿಕರ ಬೆಳವಣಿಗೆ. ಕಳೆದು ಹೋದ  ವಿಷಯಗಳಿಗೆ ಕೊರಗುತ್ತಾ ಕೂರಬೇಡಿ.  ಮನೋಭಾವ ಬದಲಿಸಿಕೊಳ್ಳಿ. ಶಾಂತ ಮನಸ್ಸು ಬೆಳೆಸಿಕೊಳ್ಳಿ.

ಸಿಂಹ
ವೃತ್ತಿಯಲ್ಲೂ, ಮನೆಯಲ್ಲೂ ಹೆಚ್ಚಿನ ಹೊಣೆಗಾರಿಕೆ. ಅದನ್ನು ನಿಭಾಯಿಸಲು ಪ್ರಯತ್ನಿಸಿ. ಇದರ ಮಧ್ಯೆ ಆರೋಗ್ಯ ಕಡೆಗಣಿಸಬೇಡಿ.

ಕನ್ಯಾ
ಕಠಿಣ ಉದ್ದೇಶ ಸಾಧಿಸುವ ಪ್ರಯತ್ನದಲ್ಲೇ ನಿಮ್ಮ ದಿನ ಕಳೆದು ಹೋಗುತ್ತದೆ. ಉಳಿದ ವಿಷಯಗಳು ಗೌಣವಾಗುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶ ಸಿಗಲಿದೆ.

ತುಲಾ
ಬಾಕಿ ಉಳಿದಿರುವ ಹಳೆಯ ಕೆಲಸಗಳನ್ನು ಪೂರೈಸಲು ಇಂದು ಗಮನ ಕೊಡಿ. ಎಲ್ಲವೂ ನಿಮಗೆ ಅನುಕೂಲಕರವಾಗಿ ಸಾಗುವುದು.

ವೃಶ್ಚಿಕ
ನಿಮಗೆ ತೃಪ್ತಿ ತರುವ ಬೆಳವಣಿಗೆ ಇಂದು ಸಂಭವಿಸದು. ಹಾಗಾಗಿ ಸಣ್ಣ ಮಟ್ಟಿನ ಅತೃಪ್ತಿ ದಿನವಿಡೀ ಉಳಿಯುವುದು. ಅಧ್ಯಾತ್ಮದತ್ತ ಒಲವು.

ಧನು
ವೃತ್ತಿಯ ಒತ್ತಡ ಇಂದು ಕಡಿಮೆ. ಹಾಗಾಗಿ ಪ್ರೀತಿಪಾತ್ರರ ಜತೆ ನಿರಾಳ ಸಮಯ ಕಳೆಯಲು ಅವಕಾಶ. ಹಣದ ಚಿಂತೆ ನಿವಾರಣೆ. ಬಂಧುಗಳಿಂದ ನೆರವು.

ಮಕರ
ಮನೆಯಲ್ಲಿ ಅತಿಯಾದ ಕೆಲಸ. ಅದರಲ್ಲೇ ಸಂತೋಷ ಪಡುವಿರಿ. ಹಾಗಾಗಿ ಒತ್ತಡ ಬಾಧಿಸದು. ಆರೋಗ್ಯಕರ ಆಹಾರ ಸೇವಿಸಿರಿ.

ಕುಂಭ
ವೃತ್ತಿಗೆ ಸಂಬಂಧಿಸಿ ತೃಪ್ತಿಕರ ಬೆಳವಣಿಗೆ. ಆರ್ಥಿಕವಾಗಿ ನೀವು ನೆರವು ನೀಡಿದವರಿಂದ ಪ್ರತಿಫಲ ಪಡೆಯುವಿರಿ. ಕೌಟುಂಬಿಕ ಕ್ಲೇಶ ನಿವಾರಣೆ.

ಮೀನ
ಸುಗಮ ಕಾರ್ಯ. ಇತರರ ನೆರವು. ಕುಟುಂಬ ಸದಸ್ಯರ ಜತೆ ಉತ್ತಮ ಬಾಂಧವ್ಯ. ಆರ್ಥಿಕವಾಗಿ ಸಮಾಧಾನಕರ. ಆರೋಗ್ಯ ಸುಸ್ಥಿರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!