Friday, March 1, 2024

ದಿನಭವಿಷ್ಯ: ಈ ರಾಶಿಗೆ ಇಂದು ಸಂಪತ್ತು ಸಮೃದ್ಧಿ ಹೆಚ್ಚಳ

ಮೇಷ
ಕೆಲ ವಿಷಯಗಳಲ್ಲಿ ನಿಮ್ಮ ನಿಲುವಿಗೇ ಅಂಟಿಕೊಳ್ಳುವ ಜಿಗುಟುತನ ಬಿಡಿ. ಅದರಿಂದ ಮನೆಯಲ್ಲಿ  ಅಶಾಂತಿ.ಹೊಂದಾಣಿಕೆ ಕೂಡ ಮುಖ್ಯ.

ವೃಷಭ
ಕೆಲಸದಲ್ಲಿ ಫಲ ಸಿಗಲು  ಕಠಿಣ ಪರಿಶ್ರಮ ಬೇಕು.  ಖಾಸಗಿ ಬದುಕಲ್ಲಿ ಭಾವನಾತ್ಮಕ ಏರುಪೇರು. ಆಪ್ತರಿಂದ  ನಿಮ್ಮ ಅಹವಾಲು ನಿರಾಕರಣೆ.

ಮಿಥುನ
ಸಹೋದ್ಯೋಗಿಗಳ ಜತೆ ಸಂವಹನ ಕೊರತೆಯಿಂದ ಬಿಕ್ಕಟ್ಟು. ಪ್ರತಿಕೂಲ ಪರಿಸ್ಥಿತಿಗೆ ಎದೆಗುಂದದಿರಿ. ಧೈರ್ಯದಿಂದ ಅದನ್ನು ಎದುರಿಸಿ.

ಕಟಕ
ಸಾಂಸಾರಿಕ ಬದುಕಿನಲ್ಲಿ ತುಸು ಉದ್ವಿಗ್ನತೆ ಉಂಟಾದೀತು. ಸಹನೆಯಿಂದ ವರ್ತಿಸುವುದು ಅವಶ್ಯ. ಇದರಿಂದ ವೃತ್ತಿಯ ಮೇಲೂ ಪರಿಣಾಮ.

ಸಿಂಹ
ಮನೆಯಲ್ಲಿ ಶಾಂತಿ, ಸೌಹಾರ್ದ. ವೃತ್ತಿಯಲ್ಲಿ ಕೂಡ ಸಮಾಧಾನದ ಬೆಳವಣಿಗೆ. ನಿಮ್ಮ ಕೆಲಸವು ಇತರರಿಂದ ಮೆಚ್ಚುಗೆ ಪಡೆಯುವುದು.

ಕನ್ಯಾ
ವೃತ್ತಿಯಲ್ಲಿ ಹೆಚ್ಚು ಜವಾಬ್ದಾರಿ. ನಿಮ್ಮ ಸಾಮರ್ಥ್ಯದ ಕುರಿತು ವಿಶ್ವಾಸವಿರಲಿ. ಸ್ನೇಹಿತರ ಜತೆ ಕಾಲ ಕಳೆಯುವ ಅವಕಾಶ. ಆಹಾರ ಹಿತಮಿತವಾಗಿರಲಿ.

ತುಲಾ
ಕೌಟುಂಬಿಕ ಸಂಬಂಧ ಉತ್ತಮ. ಭಿನ್ನಮತ ನಿವಾರಣೆ. ವೃತ್ತಿಯಲ್ಲಿ ಕಂಡುಬಂದ ಬಿಕ್ಕಟ್ಟು ಪರಿಹಾರದ ಲಕ್ಷಣ ತೋರಲಿದೆ. ಇತರರ ಸಹಕಾರ ಲಭ್ಯ.

ವೃಶ್ಚಿಕ
ಬಿಗುಮಾನ ಬದಿಗಿಟ್ಟು ವ್ಯವಹರಿಸಿದರೆ ಕಾರ್ಯದಲ್ಲಿ ಸಫಲತೆ. ನಿಮ್ಮ ವ್ಯಕ್ತಿತ್ವ ಇತರರನ್ನು ಆಕರ್ಷಿಸುವುದು. ಆರ್ಥಿಕ ಸಂಕಷ್ಟ ನಿವಾರಣೆ, ಧನಪ್ರಾಪ್ತಿ.

ಧನು
ಕುಟುಂಬ ಸದಸ್ಯರ ಜತೆ ಭಿನ್ನಮತ, ವಾಗ್ವಾದ ಏರ್ಪಡಬಹುದು. ಅದನ್ನು ವಿಕೋಪಕ್ಕೆ ಕೊಂಡೊಯ್ಯದಿರಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ.

ಮಕರ
ನೀವು ಸಾಧಿಸ ಬಯಸುವ ಗುರಿ ಸನಿಹ ವಾಗಲಿದೆ. ಕಷ್ಟಗಳು ಎದುರಾದರೂ ಅವು ಪರಿಹಾರ ಕಾಣುವವು. ಹಣದ ಬಿಕ್ಕಟ್ಟು ನಿವಾರಣೆ.

ಕುಂಭ
ಕೆಲಸದ ಒತ್ತಡದಿಂದ ಹೊರಬಂದು ನಿಮ್ಮ ಮೆಚ್ಚಿನ ಹವ್ಯಾಸದಲ್ಲಿ ತೊಡಗಿ. ಬಿಡುವು ಮಾಡಿಕೊಳ್ಳಿ. ಅದರಲ್ಲಿ ಸಂತೋಷ ಕಾಣುವಿರಿ. ಕೌಟುಂಬಿಕ ಸಮ್ಮಿಲನ.

ಮೀನ
ಕಠಿಣ ಹೊಣೆಗಾರಿಕೆ ಹೆಗಲೇರಿದರೂ ಸಹೋದ್ಯೋಗಿಗಳ ಉತ್ತಮ ಸಹಕಾರ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಪ್ರತಿಕೂಲ ಬೆಳವಣಿಗೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!