ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ?*

ಮೇಷ
ಧಾರ್ಮಿಕ ವಿಚಾರದಲ್ಲಿ ಹೆಚ್ಚು ಆಸಕ್ತಿ ಮೂಡೀತು. ಬದುಕಿನ ಜಂಜಾಟಗಳಿಂದ  ನೆಮ್ಮದಿ ಪಡೆಯುವ ಗುರಿ.ಲೌಕಿಕ ವ್ಯವಹಾರ ನಿಮ್ಮನ್ನು ಬಿಡದು.

ವೃಷಭ
ಆತ್ಮೀಯ ಸಂಬಂಧ ಇನ್ನಷ್ಟು ಬಲವಾಗುವುದು. ಭಿನ್ನಮತ ಇಂದು ಕಾಡದು. ಖರೀದಿಯ ವ್ಯವಹಾರ ಜೋರು. ಖರ್ಚು ಹೆಚ್ಚಳ.

ಮಿಥುನ
ಇಂದು ಮನಸ್ಸು ತುಸು ಅಸ್ತವ್ಯಸ್ತ. ಆದರೆ ನಿಮ್ಮ ದಿನವಹಿ ವ್ಯವಹಾರಕ್ಕೆ ಅಡ್ಡಿ ಬರಲಾರದು. ಆರ್ಥಿಕವಾಗಿ ಅಭದ್ರತೆಯ ಭೀತಿ ಕಾಡಬಹುದು.

ಕಟಕ
ಹೃದಯದ ಭಾವನೆ ಇಂದು ತೀವ್ರವಾಗಿ ಕಾಡಲಿದೆ. ಸೂಕ್ತ ಸ್ಪಂದನೆ ಸಿಗದೆ ನಿರಾಶೆ ಸಂಭವ. ವಸ್ತು ಖರೀದಿ ಹುಮ್ಮಸ್ಸಿನಲ್ಲಿ  ಅಧಿಕ ವ್ಯಯವಾದೀತು.

ಸಿಂಹ
ಇಂದು ಸಮಸ್ಯೆ ಎದುರಿಸುವಿರಿ. ಅದನ್ನು ನಾಜೂಕಿನಿಂದ ನಿಭಾಯಿಸಲು ಸನ್ನದ್ಧರಾಗಿರಿ. ಕಠಿಣ ಕ್ರಮಗಳು ಪ್ರತಿಕೂಲ ಪರಿಣಾಮ ಬೀರೀತು.

ಕನ್ಯಾ
ಅಪರಿಚಿತ ವ್ಯವಹಾರಕ್ಕೆ ಕೈಹಾಕುವ ಮುನ್ನ ಯೋಚಿಸಿ. ಕೈಗೆಟುಕುವ ಗುರಿಯತ್ತ ನೋಡುವುದು ವಿಹಿತ. ಇಲ್ಲವಾದರೆ ನಿರಾಶೆ ಉಂಟಾದೀತು.

ತುಲಾ
ನೀವು ಭಾವನಾತ್ಮಕ ವ್ಯಕ್ತಿ. ಆದರೆ ಇಂದು ಭಾವುಕತೆ ಬದಿಗಿಟ್ಟು ಪ್ರಾಕ್ಟಿಕಲ್ ಆಗಿ ವರ್ತಿಸಿರಿ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುವುದು.

ವೃಶ್ಚಿಕ
ಸ್ವಂತ ವಿಷಯಕ್ಕಿಂತ ಹೆಚ್ಚು ಇತರರ ವಿಷಯಕ್ಕೆ ಆಸಕ್ತಿ ವಹಿಸುವಿರಿ. ಅದು ನಿಮಗೆ ಸಮಸ್ಯೆ ತಂದೀತು. ಪ್ರೀತಿಯ ಭಾವ ನಿಮ್ಮನ್ನು ಇಂದು ಆವರಿಸಬಹುದು.

ಧನು
ಆಸೆಗಳಿಗೆ ಕಡಿವಾಣ ಹಾಕಿ. ಮುಖ್ಯ ಕಾರ್ಯ ಪೂರೈಸಲು ಗಮನ ಕೊಡಿ. ನಿರಾಶವಾದ ತ್ಯಜಿಸಿ. ಸಮಸ್ಯೆ ಪರಿಹಾರವಾಗಿ ಒಳಿತಾಗುವುದು.

ಮಕರ
ಸ್ವಹಿತಾಸಕ್ತಿಗೆ ಹೆಚ್ಚು ಗಮನ ಕೊಡಿ. ಬಿಡುವಿಲ್ಲದ ಕಾರ್ಯ ನಿಮಗಿಂದು ಕಾದಿದೆ. ಒತ್ತಡಕ್ಕೆ ಮಣಿದು  ಇಷ್ಟವಿಲ್ಲದ ಕಾರ್ಯ ಮಾಡಲು ಹೋಗದಿರಿ.

ಕುಂಭ
ಜನರೊಂದಿಗೆ ವ್ಯವಹರಿಸುವಲ್ಲಿ ಇಂದು ತೊಡಕು ಕಾಣುವಿರಿ. ನಿಮ್ಮ ಮನಸ್ಸಿಂದು ಬೇರಾವುದೋ ಸಮಸ್ಯೆಯಲ್ಲಿ ವ್ಯಸ್ತವಾಗಿರುವುದು.

ಮೀನ
ಪರಿಹರಿಸದ ಕೆಲವು ಸಮಸ್ಯೆ ನಿಮ್ಮನ್ನು ಕಾಡುತ್ತದೆ. ಹಾಗೆಂದು ನಿಮ್ಮ ಆಶಾವಾದ ಕುಂದಲಾರದು. ಆಪ್ತರ ಜತೆಗೆ ಸಂತೋಷ ಆಚರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!