ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಷ
ಆತ್ಮವಿಶ್ವಾಸ ತುಂಬಿ ತುಳುಕುವ ದಿನವಿದು. ಕಾರ್ಯದಲ್ಲಿ ಸಫಲತೆ. ಯಾವುದೇ ಕಾರ್ಯ ಮುಗಿಸಬಲ್ಲೆನೆಂಬ ಧೈರ್ಯ. ಕೌಟುಂಬಿಕ ಸಹಕಾರ.

ವೃಷಭ
ಆಶಾವಾದದ ದಿನ. ಉದ್ದೇಶ ಸಫಲತೆಯ ಸಂಕೇತ ತೋರುವುದು. ಕೌಟುಂಬಿಕ ಹೊಣೆಗಾರಿಕೆ ಹೆಚ್ಚಿದರೂ ಅದನ್ನು ಸರಿಯಾಗಿ ನಿಭಾಯಿಸುವಿರಿ.

ಮಿಥುನ
ಮುರಿದ ಸಂಬಂಧವು ಮತ್ತೆ ಚಿಗುರುವುದು. ಆತ್ಮೀಯ ಸ್ನೇಹಿತರ ಜತೆಗೂಡಿ ಕಾಲ ಕಳೆಯುವ ಅವಕಾಶ. ವೈವಾಹಿಕ ಜೀವನ ಸುಖಕರ, ತೃಪ್ತಿಕರ.

ಕಟಕ
ಹಗಲು ಕನಸು ಕಾಣುವುದರಲ್ಲೇ ಮೈಮರೆಯಬೇಡಿ. ಗ್ರಹಗತಿಯು ಕಠಿಣ ಹಾದಿ ತೋರುತ್ತಿದೆ. ಸಕ್ರಿಯರಾಗಿ ಕಾರ್ಯ ಎಸಗಿದರಷ್ಟೇ ಫಲ.

ಸಿಂಹ
ನೀವಿಂದು ಕಠಿಣ ಶ್ರಮ ಪಡಬೇಕಾಗಿದೆ. ಹಾಗೆ ಮಾಡಿದರಷ್ಟೇ ಕಾರ್ಯವು ಯಶ ಕಾಣುವುದು. ಹಣದ ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆಯಿಡಿ.

ಕನ್ಯಾ
ನಿಮಗೆ ನೋವ ತರುವ, ಸದಾ ಟೀಕಿಸುವ ಜನರ ಸಖ್ಯ ಕಡಿಯುವುದೇ ಒಳ್ಳೆಯದು. ಹದಗೆಟ್ಟ ಬಾಂಧವ್ಯ ದೀರ್ಘ ಎಳೆಯಬೇಡಿ. ಆರ್ಥಿಕ ಒತ್ತಡ ಹೆಚ್ಚು.

ತುಲಾ
ಕೈಗೆತ್ತಿಕೊಳ್ಳುವ ಆರ್ಥಿಕ ವ್ಯವಹಾರ ಉತ್ತಮ ಫಲ ನೀಡುವುದು. ಮುಖ್ಯ ನಿರ್ಧಾರದಲ್ಲಿ ಅನಿಶ್ಚಿತತೆ ತೋರದಿರಿ. ಕೈಗೊಂಡ ನಿರ್ಧಾರ ತಕ್ಷಣ ಅನುಷ್ಠಾನಗೊಳಿಸಿ.

ವೃಶ್ಚಿಕ
ಮನೆಯ ಕೆಲಸ ಮತ್ತು ವೃತ್ತಿಯ ಮಧ್ಯೆ ಹೊಂದಾಣಿಕೆ ಸಾಧಿಸಿರಿ. ಒಂದನ್ನು ಕಡೆಗಣಿಸಿದರೂ ಅದು ನಿಮಗೆ ಪ್ರತಿಕೂಲ ಆದೀತು. ಆರ್ಥಿಕ ಒತ್ತಡ ಹೆಚ್ಚಳ.

ಧನು
ದೊಡ್ಡ ಹೊಣೆ ಹೆಗಲ ಮೇಲೆ ಬೀಳಬಹುದು. ಇತರರ ಸಹಾಯ ಪಡೆಯಲು ಹಿಂಜರಿಕೆ ಬೇಡ. ಆಹಾರ ಸೇವನೆಯಲ್ಲಿ ಹೆಚ್ಚು ಎಚ್ಚರ ವಹಿಸಿರಿ.

ಮಕರ
ಇಂದು ಪ್ರತಿಯೊಂದು ಕಾರ್ಯದಲ್ಲೂ ತೃಪ್ತಿಕರ ಬೆಳವಣಿಗೆ ಕಾಣುವಿರಿ. ಹಾಗೆಂದು ಸಣ್ಣ ವಿಷಯಕ್ಕೆ ತಲೆಬಿಸಿ ಮಾಡುವ ಸ್ವಭಾವ ನೀವು ಬಿಡಲಾರಿರಿ.

ಕುಂಭ
ಕೆಲಸದಲ್ಲಿ ಯಶ ಸಾಧಿಸಿದರೂ ಕೆಲವರಿಗೆ ಅದು ತೃಪ್ತಿ ತರುವುದಿಲ್ಲ. ಅವರು ನಿಮ್ಮಿಂದ ಹೆಚ್ಚಿನದ್ದನ್ನು ಅಪೇಕ್ಷಿಸುವರು. ಕೌಟುಂಬಿಕ ನೆಮ್ಮದಿ.

ಮೀನ
ವೈಯಕ್ತಿಕವಾಗಿ, ವೃತ್ತಿಪರವಾಗಿ ನೀವು ಬೆಳವಣಿಗೆ ಸಾಧಿಸುವಿರಿ. ಹಣವನ್ನು ವ್ಯಯಿಸುವಲ್ಲಿ  ಜಾಣತನ ತೋರುವಿರಿ. ಹೆಚ್ಚಿನ ಸಮಸ್ಯೆ ನಿಮಗಿಂದು ಕಾಡದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!