RBI ಗವರ್ನರ್ ಶಕ್ತಿಕಾಂತ ದಾಸ್ ಗೆ ಗ್ಲೋಬಲ್ ಫೈನಾನ್ಸ್ ನಿಂದ ಎ+ ಗ್ರೇಡ್ ಗೌರವ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಅಮೆರಿಕದ ಹಣಕಾಸು ನಿಯತಕಾಲಿಕೆ ಗ್ಲೋಬಲ್ ಫೈನಾನ್ಸ್ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಜಾಗತಿಕವಾಗಿ ಅತ್ಯುತ್ತಮ ಕೇಂದ್ರ ಬ್ಯಾಂಕರ್ ಎಂದು ಎ+ ಗ್ರೇಡ್ ನೀಡಿದೆ.

ದೇಶದ ಕರೆನ್ಸಿಯನ್ನು ಸ್ಥಿರವಾಗಿರಿಸುವುದು, ಹಣದುಬ್ಬರ ನಿಯಂತ್ರಣ , ಆರ್ಥಿಕ ಬೆಳವಣಿಗೆಯನ್ನು ಉತ್ತೇಜನ ಮತ್ತು ಬಡ್ಡಿದರಗಳನ್ನು ಸಮರ್ಥವಾಗಿ ನಿರ್ವಹಿಸುವಂತಹ ಅಂಶಗಳ ಆಧಾರದ ಮೇಲೆ ಗ್ಲೋಬಲ್ ಫೈನಾನ್ಸ್ ಕೇಂದ್ರ ಬ್ಯಾಂಕ್ ಗವರ್ನರ್‌ ಗಳನ್ನು ಮೌಲ್ಯಮಾಪನ ಮಾಡಿದೆ.

ದಾಸ್ ಅವರಲ್ಲದೆ, ಇತರ ಇಬ್ಬರು ಕೇಂದ್ರೀಯ ಬ್ಯಾಂಕರ್‌ಗಳು ಸಹ ‘ಎ +’ ಗ್ರೇಡ್ ಪಡೆದಿದ್ದಾರೆ. ಸ್ವಿಟ್ಜರ್ಲೆಂಡ್‌ನ ಥಾಮಸ್ ಜೆ. ಜೋರ್ಡಾನ್ ಮತ್ತು ವಿಯೆಟ್ನಾಂನ ನ್ಗುಯೆನ್ ಥಿ ಹಾಂಗ್ ಅವರು ಎ+ ಗ್ರೇಡ್ ಪಡೆದಿದ್ದಾರೆ.

ಟಾಪ್-10 ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಪಟ್ಟಿ

ಭಾರತ: ಶಕ್ತಿಕಾಂತ ದಾಸ್ (A+)

ಸ್ವಿಟ್ಜರ್ಲೆಂಡ್: ಥಾಮಸ್ ಜೆ. ಜೋರ್ಡಾನ್ (A+)

ವಿಯೆಟ್ನಾಂ: ನ್ಗುಯೆನ್ ಥಿ ಹಾಂಗ್ (A+)

ಬ್ರೆಜಿಲ್: ರಾಬರ್ಟೊ ಕ್ಯಾಂಪೋಸ್ ನೆಟೊ (ಎ)

ಇಸ್ರೇಲ್: ಅಮೀರ್ ಯಾರೋನ್(ಎ)

ಮಾರಿಷಸ್: ಹರ್ಷವ್ ಕುಮಾರ್ ಸೀಗೋಳಮ್ (ಎ)

ನ್ಯೂಜಿಲೆಂಡ್: ಆಡ್ರಿಯನ್ ಓರ್(ಎ)

ಪರಾಗ್ವೆ: ಜೋಸ್ ಕ್ಯಾಂಟೆರೊ ಸಿಯೆರಾ (ಎ)

ಪೆರು: ಜೂಲಿಯೊ ವೆಲ್ಡೆ (ಎ)

ತೈವಾನ್: ಚಿನ್-ಲಾಂಗ್ ಯಾಂಗ್ (ಎ)

ಉರುಗ್ವೆ: ಡಿಯಾಗೋ ಲ್ಯಾಬಟ್ (ಎ)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!