ದಿನಭವಿಷ್ಯ: ಯಾವ ರಾಶಿಗೆ ಶುಭ, ಅಶುಭ?

ಮೇಷ
ಹಲವಾರು ಕಾರ್ಯ ಪೂರೈಸಬೇಕಾದ ಒತ್ತಡ. ವಿರಾಮಕ್ಕೆ ಅವಕಾಶ ಸಿಗದು. ಕೌಟುಂಬಿಕ ಬಿಕ್ಕಟ್ಟು, ಮುನಿಸು ಉಂಟಾದೀತು. ಹೊಂದಾಣಿಕೆ ಮುಖ್ಯ.

ವೃಷಭ
ವಾದವಿವಾದ, ಮಾತಿನ ಚಕಮಕಿ ಸಂಭವ. ಹಾಗಾಗಿ ನೀವಿಂದು ಹೆಚ್ಚು ತಾಳ್ಮೆ ಪ್ರದರ್ಶಿಸಬೇಕು. ಮುಖ್ಯ ನಿರ್ಧಾರ ಇಂದು ತಾಳದಿರಿ.

ಮಿಥುನ
ಅನಿರೀಕ್ಷಿತ ಬದಲಾವಣೆಗೆ ಸಾಕ್ಷಿಯಾಗುವಿರಿ. ಅದಕ್ಕೆ ಹೊಂದಿಕೊಳ್ಳಲು ಕಲಿಯಿರಿ. ಮನೆಯವರ ಸಲಹೆಗೆ ಸೂಕ್ತವಾಗಿ ಸ್ಪಂದಿಸಿರಿ.

ಕಟಕ
ಕೆಲವು ಪರಿಸ್ಥಿತಿ ನಿಭಾಯಿಸಲು ಕಷ್ಟ ಪಡುವಿರಿ. ನಿಮ್ಮ ನಿಯಂತ್ರಣ ಮೀರಿ ಸಾಗಬಹುದು. ಪ್ರತಿ ವಿಷಯದಲ್ಲೂ ಹೆಚ್ಚಿನ ಗಮನ ಅವಶ್ಯ.

ಸಿಂಹ
ನಿಮ್ಮ ಪಾಲಿಗೆ ಇಂದು ಎಲ್ಲವೂ ಸುಗಮವಾಗಿ ಸಾಗುವುದು. ಕಾರ್ಯ ಸಿದ್ಧಿಯಾಗುವುದು. ಪ್ರೀತಿಯ ವಿಷಯದಲ್ಲಿ ಸಕಾರಾತ್ಮಕ ಬೆಳವಣಿಗೆ. ಆರೋಗ್ಯ ತೃಪ್ತಿಕರ.

ಕನ್ಯಾ
ನಿಮ್ಮ ಆಕಾಂಕ್ಷೆ ಈಡೇರುವುದು. ವಿವಾಹಾಕಾಂಕ್ಷಿಗಳಿಗೆ ಪೂರಕ ಬೆಳವಣಿಗೆ. ಶೇರು ವ್ಯವಹಾರದಲ್ಲಿ ತೊಡಗಿದವರಿಗೆ ಲಾಭ. ಕೌಟುಂಬಿಕ ನೆಮ್ಮದಿ.

ತುಲಾ
ವೃತ್ತಿಯಲ್ಲಿ, ವ್ಯವಹಾರದಲ್ಲಿ ಅದೃಷ್ಟವಿದೆ. ಆರ್ಥಿಕ ಉನ್ನತಿ. ಕೌಟುಂಬಿಕ ಸಹಕಾರ, ಭಿನ್ನಮತ ನಿವಾರಣೆ. ಸಮಸ್ಯೆ ಪರಿಹಾರ.

ವೃಶ್ಚಿಕ
ಪ್ರೀತಿಯ ವಿಷಯದಲ್ಲಿ ಸಮಸ್ಯೆ ಕಾಡುತ್ತಿದ್ದರೆ ಅದಕ್ಕಿಂದು ಪರಿಹಾರ ದೊರಕುವುದು. ನಿಮ್ಮಿಂದ ಸಕಾರಾತ್ಮಕ ನಡೆನುಡಿ ಅವಶ್ಯ. ವದಂತಿಗೆ ಕಿವಿಗೊಡಬೇಡಿ.

ಧನು
ಸಕಾಲದಲ್ಲಿ ಕಾರ್ಯ ಪೂರೈಸುವುದು. ಎಲ್ಲರೊಡನೆ ಉತ್ತಮ ಬಾಂಧವ್ಯ. ವೃತ್ತಿಯಲ್ಲಿ ಮೂಡಿದ್ದ ಅಸಮಾಧಾನ ನಿವಾರಣೆ. ಕೌಟುಂಬಿಕ ಸಹಕಾರ.

ಮಕರ
ವೃತ್ತಿಯಲ್ಲಿ ನಿಮ್ಮ ನಿರ್ವಹಣೆ ಎಲ್ಲರ ಗಮನ ಸೆಳೆಯುವುದು. ವ್ಯಕ್ತಿಗತ ಸಮಸ್ಯೆಯೊಂದು ಸುಖಾಂತ್ಯ ಕಾಣುವುದು. ಮಾನಸಿಕ ನಿರಾಳತೆ.

ಕುಂಭ
ಅತಿಯಾದ ಕೆಲಸದ ಒತ್ತಡ. ಆದರೂ ತೃಪ್ತಿಕರ ಬೆಳವಣಿಗೆ ಕಾಣಲಾರಿರಿ. ಕೌಟಂಬಿಕವಾಗಿ ಸಂವಹನದ ಕೊರತೆ ಕಾಡಬಹುದು. ಅಸಂತೃಪ್ತಿ ಕಾಡುವುದು.

ಮೀನ
ಭಾವನಾತ್ಮಕ ಏರುಪೇರು. ಸಂಗಾತಿ ಜತೆಗೆ ವಾಗ್ವಾದ ನಡೆದೀತು. ಏಕಾಗ್ರಚಿತ್ತತೆ ಕಷ್ಟ. ಹಣದ ನಷ್ಟವೂ ಸಂಭವಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!