ದಿನಭವಿಷ್ಯ: ಇಂದು ಯಾವ ರಾಶಿಗೆ ಶುಭ, ಅಶುಭ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೇಷ
ಕೌಟುಂಬಿಕ ವಿಷಯದಲ್ಲಿ ಕೆಲವು ಬಿಕ್ಕಟ್ಟು ಉಂಟಾದೀತು. ಅದನ್ನು ಬೇಗನೆ ಪರಿಹರಿಸಿ. ವಿಳಂಬ ನೀತಿ ಅನುಸರಿಸಿದರೆ ಬಿಕ್ಕಟ್ಟು ಹೆಚ್ಚಾಗಬಹುದು.

ವೃಷಭ
ಪ್ರೀತಿಪಾತ್ರರ ಜತೆ ವಾಗ್ವಾದ ನಡೆದೀತು. ಅವರ ಅಭಿಪ್ರಾಯಕ್ಕೂ ಮನ್ನಣೆ ನೀಡಿದರೆ ಇಂತಹ ಸಂಘರ್ಷ ನಿವಾರಿಸಬಹುದು. ಆರ್ಥಿಕ ಒತ್ತಡ.

ಮಿಥುನ
ದಿನವಿಡೀ ಏನೇನೋ ಕಾರ್ಯದ ಒತ್ತಡ. ಕೌಟುಂಬಿಕವಾಗಿ ಹೆಚ್ಚಿನ ಹೊಣೆಗಾರಿಕೆ. ನಿಮ್ಮ ವ್ಯವಹಾರ ಸಫಲತೆ ಕಾಣದು. ಕಾದು ನೋಡುವ ನೀತಿ ಒಳಿತು.

ಕಟಕ
ಪ್ರೀತಿಯ ವಿಷಯದಲ್ಲಿ ಉದ್ವಿಗ್ನತೆ ಸೃಷ್ಟಿಸುವ ಬೆಳವಣಿಗೆ ನಡೆದೀತು. ಪರಿಸ್ಥಿತಿಯನ್ನು ಸಂಯಮದಿಂದ ನಿರ್ವಹಿಸಿ. ಕುಟುಂಬ ಸದಸ್ಯರ ಅಸಹಕಾರ.

ಸಿಂಹ
ಕೆಲವು ವಿಚಾರಗಳಲ್ಲಿ ಕ್ಷಿಪ್ರವಾಗಿ ಕಾರ್ಯಾಚರಿಸಿ. ವಿಳಂಬದಿಂದ ನಿಮಗೇ ತೊಂದರೆ. ವೃತ್ತಿಯಲ್ಲಿ ಬಿಕ್ಕಟ್ಟು ಎದುರಿಸುವಿರಿ. ಹೊಂದಾಣಿಕೆ ಮುಖ್ಯ.

ಕನ್ಯಾ
ದೈನಂದಿನ ಕೆಲಸದಲ್ಲಿ ಹೊಸ ಸವಾಲು ಎದುರಿಸುವಿರಿ. ವಿಶ್ವಾಸ
ಕಳಕೊಳ್ಳದಿರಿ. ಅಂತಿಮವಾಗಿ ಎಲ್ಲವೂ ನಿಮಗೆ ಪೂರಕವಾಗಿ ನಡೆಯುವುದು.

ತುಲಾ
ಆರ್ಥಿಕ ಒತ್ತಡ ಹೆಚ್ಚು. ಇದರಿಂದ ಮಾನಸಿಕ ಕಿರಿಕಿರಿ. ಇದು ನಿಮ್ಮ ನಡೆನುಡಿಯಲ್ಲಿ ಪ್ರತಿಫಲಿಸುವುದು. ಆಪ್ತರೊಂದಿಗೆ ಸಹನೆಯಿಂದ ವರ್ತಿಸಿ.

ವೃಶ್ಚಿಕ
ವೃತ್ತಿಯಲ್ಲಿ ಪ್ರಗತಿ. ಕೌಟುಂಬಿಕ ಕಾರ್ಯಸಿದ್ಧಿ. ಪ್ರೀತಿಪಾತ್ರರ ಭೇಟಿ. ಎಲ್ಲಾ ಸಮಸ್ಯೆಗೂ ಒಂದೇ ಪರಿಹಾರ ಹುಡುಕುವ ಪ್ರಯತ್ನ ಫಲ ನೀಡದು.

ಧನು
ದೈನಂದಿನ ಕರ್ತವ್ಯ ನೆರವೇರಿಸಲು ಅಡ್ಡಿ ಒದಗಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವಿರಿ. ವಿರೋಧಗಳು ಕೊನೆಗೊಳ್ಳುತ್ತವೆ.

ಮಕರ
ದೈನಂದಿನ ಕಾರ್ಯಕ್ಕೆ ಆದ್ಯತೆ ಕೊಡಬೇಕು. ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಕೌಟುಂಬಿಕ ಉದ್ವಿಗ್ನತೆ ಕಾಡಿದರೂ ಬಳಿಕ ಅದು ಶಮನವಾಗುವುದು.

ಕುಂಭ
ಮನೆಯಲ್ಲೂ ವೃತ್ತಿಯಲ್ಲೂ ಹೆಚ್ಚು ಹೊಣೆಗಾರಿಕೆ. ಇತರರ ಕೆಲಸವನ್ನೂ ನೀವೇ ಮಾಡಬೇಕಾದ ಪ್ರಸಂಗ. ಆರ್ಥಿಕ ವ್ಯವಹಾರದಲ್ಲಿ ಲಾಭ.

ಮೀನ
ಆಪ್ತೇಷ್ಟರ ಜತೆ ಭಿನ್ನಾಭಿಪ್ರಾಯ ಉಂಟಾದೀತು. ಅದನ್ನು ಆರಂಭದಲ್ಲೇ ಶಮನಗೊಳಿಸಿ. ನಿಮ್ಮ ಕೋಪತಾಪ ನಿಗ್ರಹಿಸಿ. ತಾಳ್ಮೆ ಮುಖ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!