ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಿನ ಜಾವ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದಟ್ಟ ಮಂಜು ಹರಡಿದೆ. ಇದರಿಂದ ಭಾಗಶಃ ಮೋಡ ಕವಿದ ವಾತಾವರಣ ಉಂಟಾಗಿದೆ.
ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 17 ಡಿಗ್ರಿ ಸೆಲ್ಸಿಯಸ್ ಇರುವುದರಿಂದ ಬೆಳಗಿನ ಜಾವ ಹೊರಗೆ ಬರಲು ಜನರು ಇಷ್ಟ ಪಡುತ್ತಿಲ್ಲ. ಅದಕ್ಕಾಗಿ ಬಹುತೇಕ ಜನರು ಚಳಿಗಾಗಿ ಕೈಕಾಲಿಗೆ ಗ್ಲೌಸ್, ತಲೆಗೆ ಮಂಕಿ ಕ್ಯಾಪ್, ಶಾಲು, ಜರ್ಕಿನ್ ಧರಿಸಿ ವಾಕಿಂಗ್ ಮಾಡುತ್ತಿದ್ದಾರೆ.
ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಬೆಳಗಿನ ಜಾವ ಸಣ್ಣ ಮಳೆ ಹನಿಯಂತೆ ಜಿನುಗುತ್ತಿದೆ. ಚಳಿ ಕಾರಣಕ್ಕೆ ಬಹುತೇಕ ಜನರು ಟೀ- ಕಾಫಿ ಶಾಪ್‌ಗಳಿಗೆ ಮುಗಿ ಬೀಳುತ್ತಿದ್ದಾರೆ.