ದಿನಭವಿಷ್ಯ: ನಿಮ್ಮ ಹತಾಶೆ ನಿಮ್ಮ ಆರೋಗ್ಯವನ್ನು ನಾಶಮಾಡಬಹುದು ಎಚ್ಚರ

ಮೇಷ
ಉದ್ಯೋಗಕ್ಕಿಂತ ಕೌಟುಂಬಿಕ ವಿಷಯ  ಆದ್ಯತೆ ಪಡೆಯಲಿದೆ. ಮನಸಲ್ಲೇನೋ ಅತೃಪ್ತಿ.ಸಹನೆ ಕಳಕೊಳ್ಳದಿರಿ. ಖರ್ಚು ಹೆಚ್ಚಳ.
ವೃಷಭ
ಸಮಸ್ಯೆಗಳಿಂದ ಕಂಗೆಡುವಿರಿ. ಆದರೆ ಅಽರರಾಗದಿರಿ. ಇದೆಲ್ಲ ತಾತ್ಕಾಲಿಕ. ಒಳ್ಳೆ ದಿನ ಬಂದೇ ಬರುತ್ತದೆ ಎಂಬ ವಿಶ್ವಾಸವಿರಲಿ.
ಮಿಥುನ
ವ್ಯಕ್ತಿಯೊಬ್ಬರು ನಿಮ್ಮ ಬದುಕಿನಲ್ಲಿ ಕುಶಿ ಮತ್ತು ನೋವು ಎರಡನ್ನೂ ತರುವರು.  ಅತಿಯಾದ ಭಾವುಕತೆ ನಿಮಗೇ ಹಾನಿ ತಂದೀತು. ವಿವೇಕದಿಂದಿರಿ.
ಕಟಕ
ವದಂತಿಗಳಿಗೆ ಕಿವಿ ಗೊಡದಿರಿ. ಕಿವಿಗೊಟ್ಟರೆ ನಿಮ್ಮದೇ ಮನಶ್ಯಾಂತಿ ಹಾಳು. ಖಾಸಗಿ ಮತ್ತು ವೃತ್ತಿ ಬದುಕಿನ ಮಧ್ಯೆ ಹೊಂದಾಣಿಕೆ ಸಾಽಸಿ.
ಸಿಂಹ
ನಿಮ್ಮ ಖಾಸಗಿ ವ್ಯವಹಾರ  ಇತರರ ಟೀಕೆಗೆ ಗುರಿಯಾದೀತು. ಅದನ್ನು ಕಡೆಗಣಿಸಿ. ಆಪ್ತೇಷ್ಟರ ಹಿತ ಕಾಯಲು ಆದ್ಯತೆ ನೀಡಿ.
ಕನ್ಯಾ
ಇಂದಿನ ದಿನ ನಿಮಗೆ ಪೂರಕವಾಗಿದೆ. ವೃತ್ತಿಯಲ್ಲಿ ನೀವು ಬಯಸಿದ ಬೆಳವಣಿಗೆ. ಕೌಟುಂಬಿಕ ಸಮಸ್ಯೆ ನಿವಾರಣೆ. ಮಾನಸಿಕ ನೆಮ್ಮದಿ.
ತುಲಾ
ನಿಮ್ಮ ಆದರ್ಶವನ್ನು ಇತರರೂ ಪಾಲಿಸುವಂತೆ ಮಾಡಲು ಹೊರಡುವಿರಿ.  ನಿಮ್ಮ ಮಾತು ಅವರಿಗೆ ಅಪಥ್ಯವಾದೀತು.  ಸಹನೆಯಿರಲಿ.
ವೃಶ್ಚಿಕ
ಆರೋಗ್ಯ ಸಮಸ್ಯೆ ಕಾಣಿಸಿದರೆ ಕೂಡಲೇ ಪರಿಹಾರ ಕಂಡುಕೊಳ್ಳಿ. ನಿರ್ಲಕ್ಷ್ಯ ಬೇಡ. ಕುಟುಂಬ ಸದಸ್ಯರಿಂದ ಕಿರಿಕಿರಿ ಉಂಟಾದೀತು.
ಧನು
ಯಾವುದೇ ಪರಿಸ್ಥಿತಿಯ ವಾಸ್ತವತೆ ಅರಿಯದೆ ಪ್ರತಿಕ್ರಿಯಿಸಲು ಹೋಗಬೇಡಿ. ನೀವೇ ಇಕ್ಕಟ್ಟಿನಲ್ಲಿ ಸಿಲುಕ ಬಹುದು. ತಾಳ್ಮೆಯಿರಲಿ.
ಮಕರ
ಸಕಾರಾತ್ಮಕ ಮನೋ ಭಾವದಿಂದ ಕಾರ್ಯ ನಿರ್ವಹಿಸಿ. ಇಲ್ಲವಾದರೆ ನಿಮ್ಮ ಕೆಲಸವನ್ನು ನೀವೇ ಕೆಡಿಸಿಕೊಳ್ಳುವಿರಿ. ಅದಕ್ಕೆ ಅವಕಾಶ ಕೊಡದಿರಿ.
ಕುಂಭ
ಕಳೆದು ಹೋದ ಕೆಲಸಕ್ಕೆ ಪರಿತಾಪ ಬೇಡ. ತಪ್ಪಾಗಿದ್ದರೆ  ಸರಿಪಡಿಸುವುದು ಜಾಣತನ. ಅದನ್ನು ಸಮರ್ಥಿಸದಿರಿ.  ಮೀನ
ಕೌಟುಂಬಿಕ ವಿಚಾರ ಇಂದು ಆದ್ಯತೆ ಪಡೆಯುತ್ತದೆ. ಸಾಂಸಾರಿಕ ಶಾಂತಿ ಉಳಿಸಿಕೊಳ್ಳುವುದು ಮುಖ್ಯ. ಸಹನೆಯೂ ಅತ್ಯವಶ್ಯ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!