ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಬಾಣಂತಿಯರ ಸಾವು ಮುಂದುವರೆದಿದ್ದು, ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದಾರೆ.
ಬೆಳಗಾವಿ ತಾಲೂಕಿನ ನಿಲಜಿ ಗ್ರಾಮದ ನಿವಾಸಿ 31 ವರ್ಷದ ಅಂಜಲಿ ಪಾಟೀಲ್ ಹೆಣ್ಣು ಮಗುವಿನ ಜನ್ಮ ನೀಡಿದ ಮರು ದಿನವೇ ಸಾವನ್ನಪ್ಪಿದ್ದಾರೆ. ಮದುವೆಯಾಗಿ 12 ವರ್ಷಗಳ ಬಳಿಕ ಹಿಂದೆ ನಿಂಗಾಣಿ ಜೊತೆಗೆ ಅಂಜಲಿ ವಿವಾಹವಾಗಿತ್ತು. ಮದುವೆಯಾಗಿ ಹನ್ನೆರಡು ವರ್ಷದ ಬಳಿಕ ಅಂಜಲಿ ಗರ್ಭವತಿಯಾಗಿದ್ದು, ಕುಟುಂಬದಲ್ಲಿ ಸಂತಸ ಮನೆ ಮಾಡಿತ್ತು. ಆದ್ರೆ, ದುರದೃಷ್ಟವಶಾತ್ ನಿನ್ನೆ(ಜನವರಿ 27) ಹೆಣ್ಣು ಮಗುವಿಗೆ ಜನ್ಮ ನೀಡಿ ಇಂದು (ಜನವರಿ 28) ಸಾವನ್ನಪ್ಪಿದ್ದಾರೆ.
ನಿನ್ನೆ ಸಂಜೆ ಬಿಮ್ಸ್ ಆಸ್ಪತ್ರೆಗೆದಾಖಲಾಗಿದ್ದ ಅಂಜಲಿ ಪಾಟೀಲ್ ಅವರಿಗೆ ರಾತ್ರಿ ಸಿಜರಿನ್ ಮಾಡಲಾಗಿತ್ತು.. ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದ ಅಂಜಲಿ ಪಾಟೀಲ್ ಇಂದು ಬೆಳಗ್ಗೆ ನಾಲ್ಕು ಗಂಟೆ ಸುಮಾರಿಗೆ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಬೆಳಗಾವಿ ತಾಲೂಕಿನ ಅಲತಗಾ ಗ್ರಾಮದ ಅಂಜಲಿಗೆ ನಿಲಜಿ ಗ್ರಾಮದ ನಿಂಗಾಣಿ ಪಾಟೀಲ್ ಜೊತೆಗೆ 12 ವರ್ಷಗಳ ಹಿಂದೆ ವಿವಾಹವಾಗಿತ್ತು. ಆದ್ರೆ, ಮಕ್ಕಳಾಗಿರಲಿಲ್ಲ. ಹನ್ನೆರಡು ವರ್ಷದ ಬಳಿಕ ಗರ್ಭಿಣಿಯಾಗಿದ್ದ ಅಂಜಲಿ ನಿನ್ನೆ ಆಸ್ಪತ್ರೆಗೆ ದಾಖಲಾಗಿದ್ದಳು. ಈ ವೇಳೆ ಆರೋಗ್ಯದಲ್ಲಿ ಏರುಪೇರಾಗಿದೆ. ಆಗ ಸಿಜರಿನ್ ಮಾಡಿ ಹೆರಿಗೆ ಮಾಡಿದ್ದು ಹೆಣ್ಣು ಮಗು ಜನನವಾಗಿದೆ.
ಆದ್ರೆ ಚೆನ್ನಾಗಿದ್ದ ಅಂಜಲಿ ಪಿಡ್ಸ್ ಬಂದು ಬಿಪಿಯಲ್ಲಿ ಏರುಪೇರಾಗಿ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದಲೇ ಬಾಣಂತಿ ಅಂಜಲಿ ಪಾಟೀಲ್ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. 12 ವರ್ಷಗಳ ಬಳಿಕ ಮಗುವಾದ ಖುಷಿಯಲ್ಲಿದ್ದ ಕುಟುಂಬಸ್ಥರು ಈಗ ಅಂಜಲಿ ಸಾವು ಬರಸಿಡಿಲು ಬಡಿದಂತಾಗಿದ್ದು. ಬಿಮ್ಸ್ ಆಸ್ಪತ್ರೆಯ ಹರಿಗೆ ವಾರ್ಡ್ ಎದುರು ಆಕ್ರಂದನ ಮುಗಿಲುಮುಟ್ಟಿದೆ.