Monday, March 27, 2023

Latest Posts

ನಟಿ ಶಿಲ್ಪಾ ಶೆಟ್ಟಿಯಿಂದ ಗರ್ಭಿಣಿ ಆಲಿಯಾಗೆ ಬಂತು ವಿಶೇಷ ಗಿಫ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಸ್ಟಾರ್ ನಟಿ ಆಲಿಯಾ ಭಟ್ ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಜೊತೆಗೆ ಸಿನಿಮಾ ಪ್ರಮೋಷ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಈ ನಡುವೆ ಆಲಿಯಾ ಭಟ್‌ಗೆ ವಿಶೇಷ ಗಿಫ್ಟ್ ಸಿಕ್ಕಿದೆ. ಬಾಲಿವುಡ್ ಮತ್ತೋರ್ವ ನಟಿ ಶಿಲ್ಪಾ ಶೆಟ್ಟಿ ಆಲಿಯಾ ಭಟ್‌ಗೆ ರುಚಿಕರವಾದ ಪೀಜ್ಜಾ ಕಳುಹಿಸಿದ್ದಾರೆ.

ಭಾನುವಾರ ಆಲಿಯಾ ಶಿಲ್ಪಾ ಶೆಟ್ಟಿ ಸೆಂಡ್ ಮಾಡಿದ್ದ ಪೀಜ್ಜಾ ತಿಂದು ಸಂತಸ ಪಟ್ಟಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಶಿಲ್ಪಾ ಶೆಟ್ಟಿಗೆ ಧನ್ಯವಾದ ತಿಳಿಸಿದ್ದಾರೆ.

ಶಿಲ್ಪಾ ಕಳುಹಿಸಿದ ಪೀಜ್ಜಾದ ಫೋಟೋವನ್ನು ಆಲಿಯಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ‘ಈ ರುಚಿಕರವಾದ ಪಿಜ್ಜಾಕ್ಕಾಗಿ ನನ್ನ ಪ್ರೀತಿಯ ಶಿಲ್ಪಾ ಶೆಟ್ಟಿಗೆ ಧನ್ಯವಾದಗಳ’ ಎಂದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಮೊದಲ ಮಗುವನ್ನು ನಿರೀಕ್ಷಿಸುತ್ತಿರುವ ಆಲಿಯಾ ಈ ಮೊದಲು ಸಾಮಾಜಿಕ ಜಾಲತಾಣದಲ್ಲಿ ತಾನು ಪಿಜ್ಜಾವನ್ನು ತಿನ್ನಬೇಕು ಎಂದು ಬಹಿರಂಗಪಡಿಸಿದ್ದರು. ‘ಗೈಸ್, ಮುಂಬೈನಲ್ಲಿರುವ ಅತ್ಯುತ್ತಮವಾದ ಪಿಜ್ಜಾ ಸ್ಥಳ ಯಾವುದು? ನನಗೆ ಬಯಕೆಯಾಗಿದೆ’ ಎಂದು ಹೇಳಿಕೊಂಡಿದ್ದರು. ಇದೀಗ ಶಿಲ್ಪಾ ಶೆಟ್ಟಿ ಅತ್ಯುತ್ತಮವಾದ ಫಿಜ್ಜಾ ಕಳುಹಿಸಿಕೊಟ್ಟಿದ್ದಾರೆ. ಅಂದಹಾಗೆ ಫಿಟ್ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ ಕುಕ್ಕಿಂಗ್ ನಲ್ಲೂ ಎಕ್ಸ್‌ಪರ್ಟ್. ಹಾಗಾಗಿ ಶಿಲ್ಪಾ ಶೆಟ್ಟಿ ಆಲಿಯಾಗೆ ದಿ ಬೆಸ್ಟ್ ಪಿಜ್ಜಾ ಪಾರ್ಸೆಲ್ ಮಾಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!