ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರು ಸೋಮವಾರ ನಾಗಾಲ್ಯಾಂಡ್‌ನ ಸಣ್ಣ ಜಿಲ್ಲೆಯಾದ ಜುನ್ಹೆಬೋಟೊಗೆ ಭೇಟಿ ನೀಡಿದ್ದಾರೆ. ಆ ಮೂಲಕ ನಾಲ್ಕು ದಶಕಗಳಲ್ಲಿ ನಾಗಾಲ್ಯಾಂಡ್‌ಗೆ ಭೇಟಿ ನೀಡಿದ ಮೊದಲ ಕೇಂದ್ರ ಸಚಿವ ಎನಿಸಿಕೊಂಡದರು.
ನಾಗಾಲ್ಯಾಂಡ್‌ಗೆ ಮೂರು ದಿನಗಳ ಪ್ರವಾಸದಲ್ಲಿರುವ ರಾಜೀವ್ ಚಂದ್ರಶೇಖರ್, ದಿಮಾಪುರದಿಂದ 9 ಗಂಟೆಗಳ ಗುಡ್ಡಗಾಡು ರಸ್ತೆಗಳ ಪ್ರಯಾಣದ ಮೂಲಕ ಬೆಟ್ಟಗಳ ಮೇಲಿರುವ ಪಟ್ಟಣಕ್ಕೆ ತಲುಪಿದ್ದರು. ಅವರು ಜುನ್ಹೆಬೋಟೊ ಜಿಲ್ಲಾಡಳಿತದ ಅಧಿಕಾರಿಗಳನ್ನು ಭೇಟಿ ಮಾಡಿಸ್ಥಳೀಯ ಆಕಾಂಕ್ಷೆಗಳನ್ನು ರೂಪು ಮಾಡುವ ಮತ್ತು ಉದ್ಯೋಗಗಳು ಮತ್ತು ಉದ್ಯಮಶೀಲತೆಗಳಿಗೆ ಅವಕಾಶಗಳನ್ನು ಸೃಷ್ಟಿಸುವ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಯೋಜನೆಯನ್ನು ಅಭಿವೃದ್ಧಿಪಡಿಸಲು ಅವರನ್ನು ಕೇಳಿದರು.
ಕೇಂದ್ರ ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ಪರಿಶೀಲಿಸಿದ ಸಚಿವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಲ್ಪನೆಯಂತೆ ಯೋಜನೆಯ ಲಾಭ ಕೊನೆಯ ವ್ಯಕ್ತಿಗೆ ತಲುಪುವವರೆಗೆ, ಪ್ರತಿಯೊಬ್ಬರ ಧ್ವನಿಯನ್ನು ಆಲಿಸುವವರೆಗೆ ಮತ್ತು ಪ್ರತಿ ಕುಂದುಕೊರತೆಗಳನ್ನು ಪರಿಹರಿಸುವವರೆಗೂ ಉತ್ಸಾಹದಿಂದ ಕೆಲಸ ಮಾಡುವಂತೆ ಕಾರ್ಯಕರ್ತರನ್ನು ಒತ್ತಾಯಿಸಿದರು.
ಅವರು ಜುನ್ಹೆಬೋಟೊ ಮತ್ತು ವೊಖಾದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಿದರು. ಈ ಯೋಜನೆಯಿಂದಾಗಿ ಅವರೆಲ್ಲರ ಜೀವನವು ಹೇಗೆ ರೂಪಾಂತರಗೊಂಡಿದೆ ಎನ್ನುವುದರ ಕುರಿತು ಮಾತನಾಡಿದರು.
ರಾಜೀವ್ ಚಂದ್ರಶೇಖರ್ ಅವರು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸಿದರು ಮತ್ತು ಸಬ್ಕಾ ಸಾಥ್ ಸಬ್ಕಾ ವಿಕಾಸ್ ಸಬ್ಕಾ ವಿಶ್ವಾಸ ಮತ್ತು ಸಬ್ಕಾ ಪ್ರಯಾಸ್ ಆಧಾರಿತ ನವ ಭಾರತಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನವನ್ನು ಅವರೊಂದಿಗೆ ಹಂಚಿಕೊಂಡರು.