ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಾಖಿ ಸಾವಂತ್ ಹಾಗೂ ಮೈಸೂರು ಹುಡುಗ ಆದಿಲ್ ಮದುವೆ ವಿಷಯ ಬೀದಿಗೆ ಬಿದ್ದಿದೆ.
ಇಬ್ಬರು ಒಬ್ಬರ ಮೇಲೊಬ್ಬರು ಆರೋಪ ಮಾಡುತ್ತಿದ್ದು, ರಾಖಿಗೆ ಮಕ್ಕಳಾಗೋದಿಲ್ಲ ಎಂದು ಆದಿಲ್ ಹೇಳಿಕೊಂಡಿದ್ದರು.
ಇದೀಗ ಈ ಬಗ್ಗೆ ರಾಖಿ ಮಾತನಾಡಿದ್ದು, ನನಗೆ ಮಕ್ಕಳಾಗುವ ಸಮಸ್ಯೆ ಇತ್ತು, ಆದರೆ ಶಸ್ತ್ರಚಿಕಿತ್ಸೆಯಿಂದ ನಾನು ಆರಾಮಾಗಿದ್ದೇನೆ. ಆದಿಲ್ ಮದುವೆಗೂ ಮುನ್ನ ನನ್ನನ್ನು ಗರ್ಭಿಣಿ ಮಾಡಿದ್ದ, ಇದು ಅವನಿಗೆ ನೆನಪಿಲ್ಲ ಬರೀ ಮೋಸ ಎಂದು ರಾಖಿ ಕಣ್ಣೀರಿಟ್ಟಿದ್ದಾರೆ.
ನಾನು ಹಿಂದೂ ಹುಡುಗಿಯಾಗಿ ಆದಿಲ್‌ಗಾಗಿ ಮುಸ್ಲಿಂ ಆಗಿದ್ದೇನೆ ಅವರ ಆಚರಣೆಯನ್ನ ಫಾಲೋ ಮಾಡ್ತೇನೆ ಆದರೆ ಅವನು ನನ್ನ ಧರ್ಮವನ್ನು ಒಂದು ದಿನವೂ ಗೌರವಿಸಿಲ್ಲ ಎಂದಿದ್ದಾರೆ.
ರಾಖಿಗೆ ಮಕ್ಕಳಾಗೋದಿಲ್ಲ ಎಂದು ಆದಿಲ್ ಪತ್ರಿಕಾಗೋಷ್ಠಿ ಮಾಡಿ ಹೇಳಿದ್ದರು. ಅದಕ್ಕೆ ಸಿಟ್ಟಾದ ರಾಖಿ ವೈದ್ಯರ ಜೊತೆ ಲೈವ್ ವಿಡಿಯೋ ಮಾಡಿ ತಮಗೆ ಮಕ್ಕಳಾಗುತ್ತದೆ ಎಂದು ಹೇಳಿದ್ದರು. ಒಟ್ಟಾರೆ ರಾಖಿ ಆದಿಲ್ ಜೀವನ ಬೀದಿಗೆ ಬಿದ್ದಿದ್ದು, ಮಾಧ್ಯಮಗಳ ಮುಂದೆ ಅಳಲು ತೋರಿಸಿಕೊಳ್ಳೋದು ಮಾತ್ರ ನಿಂತಿಲ್ಲ.