Sunday, November 27, 2022

Latest Posts

ಕಲಬುರಗಿಯಲ್ಲಿ ರಾಜ್ಯ ಮಟ್ಟದ ಒಬಿಸಿ ಸಮಾವೇಶದ ಪೂರ್ವಭಾವಿ ಸಭೆ

ಹೊಸದಿಗಂತ ವರದಿ ಕಲಬುರಗಿ: 

ಮುಂಬರುವ ಅ.30ರಂದು ಕಲಬುರಗಿ, ಯಲ್ಲಿ ನಡೆಯಲಿರುವ ಹಿಂದೂಳಿದ ವರ್ಗಗಳ ರಾಜ್ಯ ಮಟ್ಟದ ಸಮಾವೇಶದ ಅಂಗವಾಗಿ ನಗರದ ಚೆಂಬರ್ ಆಫ್ ಕಾಮರ್ಸ್‌ನ ಸಭಾಂಗಣದಲ್ಲಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾನ ಅವರ ನೇತೃತ್ವದಲ್ಲಿ ಪೂರ್ವ ಭಾವಿ ಸಭೆ ಜರುಗಿತು.

ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಈ ಬೃಹತ್ ಸಮಾವೇಶದ ಯಶಸ್ವಿ ಬಗ್ಗೆ ಸಭೆಯಲ್ಲಿ ದೀರ್ಘ ಕಾಲ ಚರ್ಚೆ ನಡೆಸಿದರು.

ಸಭೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್, ರಾಜ್ಯ ಓ.ಬಿ.ಸಿ.ಮೋಚಾ೯ದ ಅಧ್ಯಕ್ಷ ನೆಲ್ ನರೇಂದ್ರ ಬಾಬು,ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜೀ ಪಾಟೀಲ್,ರಾಷ್ಟ್ರೀಯ ಓಬಿಸಿ ಕಾಯ೯ದಶಿ೯ ಯಶಪಾಲ್ ಶಮಾ೯,ರಾಜ್ಯ ಓಬಿಸಿ ಕಾಯ೯ದಶಿ೯ ವಿವೇಕ ದಬಿ,ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ, ದತ್ತಾತ್ರೇಯ ಪಾಟೀಲ್ ರೇವೂರ,ಬಿ.ಜಿ.ಪಾಟೀಲ್, ಬಸವರಾಜ ಮತ್ತಿಮೂಡ,ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ್, ಗ್ರಾಮಾಂತರ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಸಭೆ ಬಳಿಕ ಸಮಾವೇಶದ ಸ್ಥಳದ ಪರಿಶೀಲನೆ ಕೂಡ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!