2036ರ ಒಲಿಂಪಿಕ್ಸ್‌ಗಾಗಿ ಸಿದ್ಧತೆ ಆರಂಭ, 10 ಕ್ರೀಡಾಂಗಣ ನಿರ್ಮಾಣ ಮಾಡುತ್ತೇವೆ ಎಂದ ಅಮಿತ್‌ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

2036ರ ಒಲಿಂಪಿಕ್ಸ್‌ಗಾಗಿ ಅಹಮಬಾದ್‌ನಲ್ಲಿ ಈಗಾಗಲೇ ಸಿದ್ಧತೆ ಆರಂಭಿಸಿದೆ. ಇದಕ್ಕಾಗಿ 10 ಕ್ರೀಡಾಂಗಣಗಳನ್ನು ನಿರ್ಮಿಸಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಗಾಂಧಿನಗರದಲ್ಲಿ ಪ್ಯಾರಾ-ಅಥ್ಲೆಟಿಕ್ಸ್ ಗೆ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮವೊಂದಕ್ಕೆ ವರ್ಚುವಲ್ ಆಗಿ ಚಾಲನೆ ನೀಡಿ ಮಾತನಾಡಿ, ಭಾರತವು 2036ರ ಒಲಿಂಪಿಕ್ಸ್ ಆಯೋಜನೆ ಮಾಡಲಿದೆ ಎನ್ನುವ ಮಾತನ್ನು ಶಾ ಪುನರ್‌ಉಚ್ಚರಿಸಿದರು.

ಗುಜರಾತ್ ಸರ್ಕಾರವು ಕ್ರೀಡಾ ವಲಯಕ್ಕೆ ಹಲವು ಯೋಜನೆಗಳನ್ನು ಕೈಗೊಂಡಿದೆ. ಇದರಿಂದಾಗಿ ರಾಜ್ಯವು ದೇಶದಲ್ಲೇ ಅತ್ಯುತ್ತಮ ಕ್ರೀಡಾ ಮೂಲ ಸೌಕರ್ಯವನ್ನು ಹೊಂದಿದೆ. ಸರ್ದಾರ್ ಪಟೇಲ್ ಸಂಕೀರ್ಣದಲ್ಲಿ 2036ರ ಒಲಿಂಪಿಕ್ ಗೆ 10 ಕ್ರೀಡಾಂಗಣ ನಿರ್ಮಾಣವಾಗಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!