ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೋ ಮಹತ್ವಾಕಾಂಕ್ಷೆಯ ಮಾನವರಹಿತ ಗಗನಯಾನದ ಮೊದಲ ಹಾರಾಟ ಪರೀಕ್ಷೆ ತಾತ್ಕಾಲಿಕವಾಗಿ ಸ್ಥಗಿತವಾಗಿದೆ.
ಇಂದು ಬೆಳಗ್ಗೆ 8:45ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗಗನಯಾನ ಯೋಜನೆಯ ಪರೀಕ್ಷೆ ವಾಹಕದ ಉಡಾವಣೆಯಾಗಬೇಕಿತ್ತು.
ಆದರೆ ತಾಂತ್ರಿಕ ಕಾರಣದಿಂದಾಗಿ ಗನನಯಾನ ಉಡಾವಣೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಕೆಲವೇ ಸಮಯದಲ್ಲಿ ತಾಂತ್ರಿಕ ಸಮಸ್ಯೆ ಸರಿಪಡಿಸಿ ಮತ್ತೊಮ್ಮೆ ಗಗನಯಾನ ಯೋಜನೆಯ ಪರೀಕ್ಷಾ ವಾಹನದ ಉಡಾವಣೆಯನ್ನು ಕೈಗೊಳ್ಳುವುದಾಗಿ ಇಸ್ರೋ ತಿಳಿಸಿದೆ.