ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆರೋಪಪಟ್ಟಿ ಸಲ್ಲಿಕೆಗೂ ಮುನ್ನವೇ ಪವಿತ್ರ ಗೌಡ ಮತ್ತಿತರರು ಪ್ರಕರಣದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅವುಗಳನ್ನು ತಿರಸ್ಕರಿಸಲಾಯಿತು.
ದರ್ಶನ್ ಈಗ ನ್ಯಾಯಾಂಗ ಬಂಧನದ ನಂತರ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧರಾಗಿದ್ದಾರೆ. ವಿಜಯಲಕ್ಷ್ಮಿ ಸೆ.5ರಂದು ಜೈಲಿಗೆ ಹೋಗಿ ದರ್ಶನ್ ಭೇಟಿಯಾಗಿದ್ದರು. ಈ ವೇಳೆ ಬೇಲ್ ವಿಷಯ ಚರ್ಚೆಯಾಯಿತು.
ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರ ಸಹೋದರ ದಿನಕರ್ ಅವರು ಗುರುವಾರ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಈ ಹಂತದಲ್ಲಿ ಮಹತ್ವದ ಚರ್ಚೆ ನಡೆಯಿತು. ದರ್ಶನ್ ಈ ಹಿಂದೆ ವಕೀಲರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದರು.
ವಿಜಯಲಕ್ಷ್ಮೀ ಜೊತೆ ವಕೀಲರು ಬೇಲ್ ಅರ್ಜಿ ಕಳುಹಿಸಿದ್ದರು. ವಕೀಲರೊಂದಿಗೆ ಮಾತನಾಡಿದ ಬಳಿಕ ದರ್ಶನ್ ಅರ್ಜಿಗೆ ಸಹಿ ಹಾಕಿದ್ದಾರೆ. ವಿಜಯಲಕ್ಷ್ಮೀ ಹಾಗೂ ದಿನಕರ್ ಸಹಿ ಪಡೆದು ಹೋದ ಬಳಿಕ ಜೈಲಿಗೆ ನೋಟರಿ ಬಂದಿದೆ. ಸರ್ಕಾರಿ ನೋಟರಿಯವರು ಜೈಲು ಅಧಿಕಾರಿಗಳ ಸಮ್ಮುಖದಲ್ಲಿ ಜಾಮೀನು ಅರ್ಜಿ ಮತ್ತು ಅಫಿಡವಿಟ್ ಸಿದ್ಧಪಡಿಸಿದ್ದಾರೆ.