ದೆಹಲಿಯ ಜಾಮಿಯಾ ವಿವಿಯಲ್ಲಿ ಡಾಕ್ಯುಮೆಂಟರಿ ವೀಕ್ಷಣೆಗೆ ಸಿದ್ಧತೆ: ನಾಲ್ವರ ಸೆರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ಮೋದಿ (Narendra Modi) ಅವರ ಕುರಿತು ಬಿಬಿಸಿಯ ‘ಇಂಡಿಯಾ: ದಿ ಮೋದಿ ಕ್ವಶ್ಚನ್‌’ (India: The Modi Question) ಡಾಕ್ಯುಮೆಂಟರಿಯ (BBC Documentary On Modi) ವೀಕ್ಷಣೆಗೆ ಭಾರತದ ಅನೇಕ ವಿವಿಗಳು ಪಟ್ಟು ಹಿಡಿದ್ದಿದ್ದು, ವಿದ್ಯಾರ್ಥಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ಹೈದರಾಬಾದ್‌ ಹಾಗೂ ಜೆಎನ್‌ಯುನಲ್ಲಿ ಡಾಕ್ಯುಮೆಂಟರಿ ವೀಕ್ಷಣೆಗೆ ದೊಡ್ಡ ಪರದೆಯ ವ್ಯವಸ್ಥೆ ಮಾಡಿರುವುದು ಗಲಾಟೆಗೆ ಕಾರಣವಾದ ಬೆನ್ನಲ್ಲೇ ಈಗ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯಲ್ಲಿ ಬುಧವಾರ ಸಂಜೆ 6 ಗಂಟೆಗೆ ಸಾಕ್ಷ್ಯಚಿತ್ರದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ವಿಶ್ವವಿದ್ಯಾಲಯದ ಆಡಳಿತ ಮಂಡಳಿಯುಅನುಮತಿ ನಿರಾಕರಿಸಿದರೂ ಸ್ಟುಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ (SFI) ವಿದ್ಯಾರ್ಥಿ ಸಂಘಟನೆಯಿಂದ ದೊಡ್ಡ ಪರದೆಯ ವ್ಯವಸ್ಥೆ ಮಾಡಿದೆ. ಇದೀಗ ಇದರಿಂದ ಮತ್ತೆ ಗಲಾಟೆಯಾಗುವ ಸಾಧ್ಯತೆ ಇರುವುದರಿಂದ ಪೊಲೀಸರು ಜಾಮಿಯಾ ಮಿಲ್ಲಿಯಾ ವಿವಿಗೆ ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಅಲ್ಲದೆ, ಪೊಲೀಸರು ಇದುವರೆಗೆ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ಎಸ್‌ಎಫ್‌ಐ ಜಾಮಿಯಾ ಘಟಕದ ಕಾರ್ಯದರ್ಶಿ ಅಜೀಜ್‌, ಎಸ್‌ಎಫ್‌ಐ ದಕ್ಷಿಣ ದೆಹಲಿ ಪ್ರದೇಶದ ಉಪಾಧ್ಯಕ್ಷೆ ನಿವೇದ್ಯಾ, ಎಸ್‌ಎಫ್‌ಐ ಯುನಿಟ್‌ ಸದಸ್ಯರಾದ ಅಭಿರಾಮ್‌ ಹಾಗೂ ತೇಜಸ್‌ ಎಂಬುವವರನ್ನು ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದಾರೆ.

ಜೆಎನ್‌ಯುನಲ್ಲಿ ಡಾಕ್ಯುಮೆಂಟರಿ ವೀಕ್ಷಣೆ ವೇಳೆ ವಿದ್ಯುತ್‌ ಕಡಿತಗೊಂಡ ಕಾರಣ ಕಲ್ಲುತೂರಾಟ ನಡೆದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!