ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಕುರಿತು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು:
* ಕರ್ನಾಟಕ ಸಿವಿಲ್ ಸಸ್ 2011ರ ಬ್ಯಾಚ್ನ ಗೊಂದಲ ನಿವಾರಣೆಗೆ ಕೆಪಿಎಸ್ಸಿ ನೋಟಿಫೈ ಮಾಡಿದ ಪಟ್ಟಿಯನ್ನು ಸರಕಾರ ಒಪ್ಪಿಕೊಳ್ಳುತ್ತದೆ. ಅದಕ್ಕೆ ಮಸೂದೆಯೊಂದನ್ನು ತರಲು ಅನುಮೋದನೆ ನೀಡಲಾಗಿದೆ. ಮಸೂದೆಯನ್ನು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ.
* ಬಾಗಲಕೋಟೆ ಜಿಲ್ಲೆಯ ಮುಧೋಳ್ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಯನ್ನು ಟೆಂಡರ್ ಆಧಾರದಲ್ಲಿ ಗಿರಿಜಾ ರಮಣ ಇನ್ಫ್ರಾ ಪ್ರೈ.ಲಿ.ಗೆ ₹ 320 ಕೋಟಿಗಳಿಗೆ 40ವರ್ಷಗಳ ಗುತ್ತಿಗೆ ನೀಡಲಾಗಿದೆ.
* ಸಣ್ಣ ನೀರಾವರಿ ಇಲಾಖೆಯಲ್ಲಿ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜುಂಜರವಾಡಿ ಕೃಷ್ಣಾನದಿ ಏತ ನೀರಾವರಿ ಯೋಜನೆ ಮೊದಲ ಹಂತಕ್ಕೆ ₹ 49.51 ಕೋಟಿ ರೂ. ಅನುದಾನ ನೀಡಲು ಅನುಮೋದನೆ.
* ಕಲಬುರಗಿ ಜಿಲ್ಲೆ ಅಫ್ಜಲ್ಪುರ ತಾಲೂಕಿನಲ್ಲಿ ಬಾರನಹಳ್ಳಿಯಿಂದ ಗೌಡಗಾರ್ಗೆ 9.6 ಕಿ.ಮೀ. ರಸ್ತೆ ಮಾಡಲು ₹ 10.97 ಕೋಟಿಗೆ ಅನುಮೋದನೆ.
* ಉ.ಕ. ಜಿಲ್ಲೆಯ ಕುಮಟಾ ತಾಲೂಕಿನ ತಾಲೂಕು ಆಡಳಿತ ಸೌಧ ವಿಸ್ತರಣೆಗೆ ₹ 16.28 ಕೋಟಿಗಳಿಗೆ ಅನುಮೋದನೆ.
* ಮುದ್ರಾಂಕ ಇಲಾಖೆಯಲ್ಲಿ ಸ್ಟ್ಯಾಂಪ್ ಡ್ಯೂಟಿ ಶುಲ್ಕವನ್ನು ಗರಿಷ್ಠ ₹ 25 ಕೋಟಿಗಳಿಗೆ ನಿಗದಿ ಮಾಡಲು ಅನುಮೋದನೆ.
* ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ವಸತಿ ಶಾಲೆಯ ಕಟ್ಟಡ ನಿರ್ಮಾಣ ಮತ್ತು ಮೂಲಭೂತ ಸೌಕರ್ಯಕ್ಕೆ ₹ 17 ಕೋಟಿ ಮಂಜೂರು.
* ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿ ಪಡಿಸುತ್ತಿರುವ ₹ 28.61 ಕೋಟಿ ಮೊತ್ತದ ರಸ್ತೆ ಕಾಮಗಾರಿಗಳಲ್ಲಿ ಆರು ಕಾಮಗಾರಿಗಳ ಅಂದಾಜುಪಟ್ಟಿ ಬದಲಾವಣೆಗೆ ಅನುಮತಿ.
* ಬೆಂಗಳೂರು ಫೆರಿಫೆರಲ್ ರಿಂಗ್ ರಸ್ತೆ ಮಾಡಲು ಭೂಸ್ವಾಧೀನಕ್ಕೆ ಸುಪ್ರೀಂ ಕೋರ್ಟ್ ಆದೇಶದಂತೆ 100 ಮೀಟರ್ ಅಗಲದ 71 ಕಿ.ಮೀ. ರಸ್ತೆಗೆ 50 ವರ್ಷ (ಗುತ್ತಿಗೆ) ಟೋಲ್ ಸಂಗ್ರಹಕ್ಕೆ ಅವಕಾಶ ಒದಗಿಸಿ, ಟೆಂಡರ್ ಕರೆಯಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.
* ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ ಅಂದಾಜು ₹ 560 ಕೋಟಿಗೆ ಅನುಮೋದನೆ.