ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ 208 ಕೋಟಿ ಮೊತ್ತದಲ್ಲಿ ತಯಾರಾದ ರಾಕೆಟ್ ಇಂಜಿನ್ ಉದ್ಘಾಟನಾ ಘಟಕವನ್ನು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದಾರೆ. ಕರ್ನಾಟಕ ಪ್ರವಾಸದಲ್ಲಿರುವ ರಾಷ್ಟ್ರಪತಿಗಳು ಸೋಮವಾರ ನಾಡಹಬ್ಬ ದಸರಾ ಉತ್ಸವಕ್ಕೆ ಚಾಲನೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ಈ ಘಟಕವನ್ನು ಇಸ್ರೋ ಸಂಸ್ಥೆಗಾಗಿ ಸ್ಥಾಪಿಸಿದೆ. ಇದನ್ನು ಇಂಟೆಗ್ರೇಟೆಡ್ ಕ್ರಯೋಜೆನಿಕ್ ಇಂಜಿನ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ ಎಂದು ಕರೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಸಿದ್ಧಗೊಂಡಿರುವ ರಾಕೆಟ್ ಇಂಜಿನ್‌ಗಳನ್ನು ಪೂರೈಸಲಿದೆ. ಕ್ರಯೋಜೆನ್ ಇಂಜಿನ್‌ಗಳು ವಿಶ್ವದಾದ್ಯಂತ ಉಡಾವಣಾ ವಾಹನಗಳಲ್ಲಿ ಬಳಸುವ ಎಂಜಿನ್‌ಗಳಾಗಿವೆ. ಈಗಾಗಲೇ ಫ್ರಾನ್ಸ್, ಚೀನಾ, ಜಪಾನ್, ರಷ್ಯಾ ಹಾಗೂ ಅಮೆರಿಕಾ ಕ್ರಯೋಜೆನಿಕ್ ಎಂಜಿನ್ ತಯಾರಿಕೆ ತಂತ್ರಜ್ಞಾನವನ್ನು ಹೊಂದಿವೆ. ಈ ಸಾಲಿಗೆ ಭಾರತವೂ ಸೇರಲಿದೆ.