Tuesday, August 16, 2022

Latest Posts

ಇಂದಿನಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ರ ಒಡಿಶಾ, ಆಂಧ್ರಪ್ರದೇಶ ಪ್ರವಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಇಂದು ಒಡಿಶಾಕ್ಕೆ ಭೇಟಿ ನೀಡಲಿದ್ದು, ಬಳಿಕ ಅಲ್ಲಿಂದ ಆಂಧ್ರಪ್ರದೇಶಕ್ಕೆ ತೆರಳಲಿದ್ದಾರೆ.
ಇಂದು ಫೆ.19 ಮತ್ತು 20 ಒಡಿಶಾದಲ್ಲಿ ಇರಲಿದ್ದು, ಫೆ.21 ಮತ್ತು ಫೆ.22ರಂದು ಆಂಧ್ರಪ್ರದೇಶಕ್ಕೆ ತೆರಳಲಿದ್ದಾರೆ.
ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ರಾಷ್ಟ್ರಪತಿ ಕೋವಿಂದ್‌ ರನ್ನು ಸ್ವಾಗತಿಸಲಿದ್ದಾರೆ. ಒಡಿಸಾದ ಶ್ರೀ ಚೈತನ್ಯ ಗೌಡಿಯಾ ಮಠದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಗಳು ಭಾಗಿಯಾಗಲಿದ್ದಾರೆ. ಈ ವೇಳೆ ಅಂದರೆ ಸಂಜೆ 4 ರಿಂದ 6ರರವರೆಗೆ ಮಠಕ್ಕೆ ಸಾರ್ವಜನರಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಇನ್ನು ನಾಳೆ ಫೆ.20ರಂದು ಶ್ರೀಮದ್‌ ಭಕ್ತಿ ಸಿದ್ಧಾರ್ಥ ಸರಸ್ವತಿ ಗೋಸ್ವಾಮಿ ಪ್ರಭುಪಾದರ 150ನೇ ಜನ್ಮವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ.
ಫೆ.21ರಂದು ಒಡಿಶಾದಿಂದ ನೇರವಾಗಿ ಆಂಧ್ರಪ್ರದೇಶಕ್ಕೆ ತೆರಳಲಿರುವ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ವಿಶಾಖಪಟ್ಟಣಂ ನ ಫ್ಲೀಟ್‌ ರಿವಿವ್ಯೂ ಮತ್ತು ಫ್ಲೈಪಾಸ್ಟ್‌ ನಲ್ಲಿ ಭಾಗಿಯಾಗಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss