Thursday, August 11, 2022

Latest Posts

ಮತ್ತೆ ಶುರುವಾಗುತ್ತಾ ಕಾಂಗ್ರೆಸ್‌ ನ ಮೇಕೆದಾಟು ಪಾದಯಾತ್ರೆ?

 ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮೇಕೆದಾಟು ಯೋಜನೆ ಜಾರಿಗೆ ತರುವಂತೆ ಆಗ್ರಹಿಸಿ ಕಾಂಗ್ರೆಸ್‌ ಮತ್ತೆ ಪಾದಯಾತ್ರೆ ನಡೆಸಲು ಮುಂದಾಗಿದೆ. ಫೆ.27ರಂದು ರಾಮನಗರದಿಂದ ಪಾದಯಾತ್ರೆ ಪುನಾರಂಭವಾಗಲಿದೆ.
ಈ ಬಗ್ಗೆ ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ತಿಳಿಸಿದ್ದು, ಈಗಾಗಲೇ ಜ.9ರಂದು ಪ್ರಾರಂಭಿಸಿದ್ದ ಮೇಕೆದಾಟು ಪಾದಯಾತ್ರೆಯನ್ನು ಫೆ.27ರಂದು ಮತ್ತೆ ಪ್ರಾರಂಭಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕೋವಿಡ್‌ ಕಾರಣದಿಂದ ಕೇವಲ 5 ದಿನಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ನಮ್ಮ ನೀರು, ನಮ್ಮ ಹಕ್ಕು ಪಾದಯಾತ್ರೆಯನ್ನು ಮರು ಆರಂಭಿಸಲಿದ್ದೇವೆ. ರಾಮನಗರದಿಂದ ಆರಂಭಗೊಂಡು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್‌ ಕಾಲೇಜ್‌ ಮೈದಾನದಲ್ಲಿ ಸಮಾರೋಪ ನಡೆಯಲಿದೆ.
ಮೇಕೆದಾಟು ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಜನವರಿ 9ರಂದು ಮೇಕೆದಾಟುವಿನ ಸಂಗಮ ಬಳಿ 11 ದಿನಗಳ ಪಾದಯಾತ್ರೆಗೆ ಚಾಲನೆ ನೀಡಿತ್ತು. ಪಾದಯಾತ್ರೆ 4 ದಿನ ಪೂರೈಸಿ ರಾಮನಗರ ತಲುಪಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss