ಅಟಲ್ ಬಿಹಾರಿ ವಾಜಪೇಯಿ ಪುಣ್ಯಸ್ಮರಣೆ: ರಾಷ್ಟ್ರಪತಿ, ಪ್ರಧಾನಿಯವರಿಂದ ಪುಷ್ಪನಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾಜಿ ಪ್ರಧಾನಿ ದಿವಂಗತ ಅಟಲ್‌ ಬಿಹಾರಿ ವಾಜಪೇಯಿ ಅವರ 4ನೇ ಪುಣ್ಯಸ್ಮರಣೆ ಅಂಗವಾಗಿ, ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಇಂದು (ಮಂಗಳವಾರ) ಗೌರವ ಸಲ್ಲಿಸಿದರು. ರಾಷ್ಟ್ರ ರಾಜಧಾನಿಯ ‌ʻಸದೈವ್ ಅಟಲ್‌ʼಗೆ ಭೇಟಿ ನೀಡಿ ಪ್ರಮುಖ ನಾಯಕರು ಪುಷ್ಪನಮನ ಸಲ್ಲಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್,  ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್‌, ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು. ಹಾಲಿ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಗೌರವ ಸೂಚಿಸಿದರು.

ದೀರ್ಘಕಾಲದ ಅನಾರೋಗ್ಯದಿಂದಾಗಿ ಬಳಲುತ್ತಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರು ಆಗಸ್ಟ್ 16, 2018 ರಂದು ಕೊನೆಯುಸಿರೆಳೆದರು. 1996 ಮತ್ತು 1999 ರಲ್ಲಿ ಎರಡು ಬಾರಿ ಭಾರತದ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ್ದರು. ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದ ವಾಜಪೇಯಿ ಅವರು 1942 ರಲ್ಲಿ ವಿದ್ಯಾರ್ಥಿ ನಾಯಕರಾಗಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಸೇರಿದರು. 2015 ರಲ್ಲಿ ಅವರ ಜನ್ಮದಿನದಂದು ಭಾರತದ ಅತ್ಯುನ್ನತ ನಾಗರಿಕ ಗೌರವ ʻಭಾರತ ರತ್ನʼ ನೀಡಿ ಗೌರವಿಸಲಾಯಿತು.

ಅವರ ಜನ್ಮದಿನವಾದ ಡಿಸೆಂಬರ್ 25 ಅನ್ನು ನರೇಂದ್ರ ಮೋದಿ ಸರ್ಕಾರವು ಉತ್ತಮ ಆಡಳಿತ ದಿನವೆಂದು ಘೋಷಿಸಿತು. ಭಾರತದ ಪ್ರಧಾನಿಯಾದ ಮೊದಲ ಕಾಂಗ್ರೆಸ್ಸೇತರ ರಾಜಕೀಯ ನಾಯಕರಾಗಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!