ಮಾನವೀಯ ನೆರವು ನೀಡಿದ್ದಕ್ಕೆ ಭಾರತಕ್ಕೆ ಧನ್ಯವಾದ ತಿಳಿಸಿದ ಉಕ್ರೇನ್ ಅಧ್ಯಕ್ಷ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾನವೀಯ ನೆರವು ನೀಡಿ ಭಾರತಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡೊಮಿರ್ ಝೆಲೆನ್ಸ್ಕಿ ಧನ್ಯವಾದ ಹೇಳಿದ್ದಾರೆ.
ನಿಮ್ಮ ಬೆಂಬಲಕ್ಕೆ ಹಾಗೂ ಮಾನವೀಯ ಪರಿಹಾರ ನೀಡುವಲ್ಲಿ ಸಹಕರಿಸಿದ ಪ್ರಧಾನಿ ಮೋದಿ ಅವರಿಗೆ ನಮ್ಮ ಧನ್ಯವಾದ ಎಂದು ಉಕ್ರೇನ್ ಅಧ್ಯಕ್ಷ ಹೇಳಿದ್ದಾರೆ.
ರಷ್ಯಾ ಜತೆ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆಯೂ ಭಾರತ ಉಕ್ರೇನ್‌ಗೆ ಮಾನವೀಯ ನೆರವು ಪೂರೈಸಿ ಸಹಾಯ ಮಾಡಿದೆ.

ನಾನು ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದ್ದೆ. ಜಿ೨೦ ಅಧ್ಯಕ್ಷ ಸ್ಥಾನ ವಹಿಸಿದ್ದಕ್ಕೆ ಶುಭಾಶಯಗಳನ್ನು ಕೋರಿದ್ದೇನೆ. ನಾನು ಶಾಂತಿ ಸೂತ್ರವನ್ನು ಘೋಷಿಸಿದ್ದೇನೆ, ಭಾರತ ಭಾಗವಹಿಸುವಿಕೆ ಬಗ್ಗೆ ನನಗೆ ಕುತೂಹಲ ಇದೆ. ಮಾನವೀಯ ನೆರವು ಹಾಗೂ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!