ರಾಷ್ಟ್ರಪತಿ ಭಾಷಣ: ಗಣರಾಜ್ಯೋತ್ಸವವನ್ನು ಒಂದು ರಾಷ್ಟ್ರವಾಗಿ ಸಾಧಿಸಿದ್ದನ್ನು ಒಟ್ಟಾಗಿ ಆಚರಿಸುತ್ತೇವೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2023ರ ಗಣರಾಜ್ಯೋತ್ಸವ (Republic Day 2023) ಹಿನ್ನೆಲೆಯಲ್ಲಿ ಬುಧವಾರ ರಾಷ್ಟ್ರವನ್ನು ಉದ್ದೇಶಿಸಿ (Republic Day 2023 President Speech) ರಾಷ್ಟ್ರಪತಿ ದ್ರೌಪದಿ ಮುರ್ಮು(rashtrapati draupadi murmu) ಮಾತನಾಡಿದರು.

ನಾನು ಭಾರತ ಮತ್ತು ವಿದೇಶದಲ್ಲಿರುವ ನಿಮ್ಮೆಲ್ಲರಿಗೂ ನನ್ನ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಾವು ಗಣರಾಜ್ಯೋತ್ಸವವನ್ನ ಆಚರಿಸುವಾಗ, ನಾವು ಒಂದು ರಾಷ್ಟ್ರವಾಗಿ ಒಟ್ಟಿಗೆ ಸಾಧಿಸಿದ ಸಾಧನೆಗಳನ್ನ ಆಚರಿಸುತ್ತೇವೆ ಎಂದು ಹೇಳಿದರು.

ಪ್ರತಿಯೊಬ್ಬ ನಾಗರಿಕನೂ ಈ ಬಗ್ಗೆ ಹೆಮ್ಮೆ ಪಡುತ್ತಾನೆ. ನಾವೆಲ್ಲರೂ ಒಂದೇ, ಮತ್ತು ನಾವೆಲ್ಲರೂ ಭಾರತೀಯರು. ಅನೇಕ ಪಂಥಗಳು ಮತ್ತು ಅನೇಕ ಭಾಷೆಗಳು ನಮ್ಮನ್ನು ವಿಭಜಿಸಿಲ್ಲ ಆದರೆ ನಮ್ಮನ್ನು ಸಂಪರ್ಕಿಸಿವೆ. ಅದಕ್ಕಾಗಿಯೇ ನಾವು ಪ್ರಜಾಪ್ರಭುತ್ವ ಗಣರಾಜ್ಯವಾಗಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು 2020 ಮಾರ್ಚ್‌ ತಿಂಗಳಲ್ಲಿ ಜಾರಿಗೆ ತಂದಿದೆ. ಈ ಮೂಲಕ ಸರ್ಕಾರವು, ಕೋವಿಡ್ ಸಾಂಕ್ರಾಮಿಕದಿಂದ ಇಡೀ ಜಗತ್ತು ಆರ್ಥಿಕ ಅಡೆತಡೆಯನ್ನು ಎದುರಿಸುತ್ತಿರುವಾಗ ಭಾರತವು ಬಡ ಕುಟುಂಬಗಳಿಗೆ ಆಹಾರ ಭದ್ರತೆಯನ್ನು ಒದಗಿಸಿದೆ. ಈ ಯೋಜನೆಯ ಸಹಾಯದಿಂದಾಗಿ ಯಾರೋಬ್ಬರು ಹಸಿವಿನಿಂದ ಬಳಲಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತಕ್ಕೆ ಜಿ20 ಅಧ್ಯಕ್ಷತೆಯು ಸಿಕ್ಕಿದುಪ್ರಜಾಪ್ರಭುತ್ವ, ಬಹುತ್ವವನ್ನು ಉತ್ತೇಜಿಸುವುದಕ್ಕೆ ದೊರೆತ ಅವಕಾಶವಾಗಿದೆ. ಇದು ಉತ್ತಮ ಜಗತ್ತು ಮತ್ತು ಅತ್ಯುತ್ತಮ ಭವಿಷ್ಯ ರೂಪಿಸುವ ಸೂಕ್ತ ವೇದಿಕೆಯಾಗಿದೆ. ಭಾರತದ ನಾಯಕತ್ವದಡಿಯಲ್ಲಿ ಜಿ20, ಸುಸ್ಥಿರ ಮತ್ತು ಸಮಾನ ಜಗತ್ತನ್ನು ಕ್ರಮವಾಗಿ ರೂಪಿಸುವ ಪ್ರಯತ್ನಗಳಿಗೆ ಇನ್ನಷ್ಟು ಬಲ ಸಿಗಲಿದೆ ಎಂಬ ನಂಬಿಕೆ ನನಗಿದೆ ಎಂದು ರಾಷ್ಟ್ರಪತಿ ಅವರು ಹೇಳಿದ್ದಾರೆ.

ಜಿ20 ಜಗತ್ತಿನ ಮೂರನೇ ಎರಡನೇ ಭಾಗದಷ್ಟು ಜನಸಂಖ್ಯೆಯನ್ನು ಮತ್ತು ಶೇ.85ರಷ್ಟು ಜಿಡಿಪಿಯನ್ನು ಪ್ರತಿನಿಧಿಸುತ್ತದೆ. ಜಾಗತಿಕ ಸವಾಲುಗಳು ಬಗ್ಗೆ ಚರ್ಚಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಸೂಕ್ತ ವೇದಿಕೆಯಾಗಿದೆ. ಸದ್ಯಕ್ಕೆ ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಗಳಿಗೆ ಸಂಬಂಧಿಸಿದಂತೆ ನಾವು ಹೆಚ್ಚು ಒತ್ತುಕೊಡಬೇಕಿದೆ ಎಂದು ಅವರು ಹೇಳಿದರು.

ಭಾರತದ ಪ್ರಗತಿಗೆ ವಿವಿಧ ರೀತಿಯಲ್ಲಿ ಕಾಣಿಕೆ ನೀಡುತ್ತಿರುವ ಪ್ರತಿಯೊಬ್ಬ ಪ್ರಜೆಯನ್ನು ನಾನು ಶ್ಲಾಘಿಸುತ್ತೇನೆ. ಜೈ ಜವಾನ್ , ಜೈ ಕಿಸಾನ್ ಮತ್ತು ಜೈ ವಿಜ್ಞಾನ, ಜೈ ಅನುಸಂಧಾನ ಎಂಬ ಮನೋಭಾವಕ್ಕೆ ತಕ್ಕಂತೆ ರೈತರು, ಕೆಲಸಗಾರರು, ವಿಜ್ಞಾನಿಗಳು, ಎಂಜನಿಯರ್ಸ್ ಹಾಗೂ ಯೋಧರು ದೇಶದ ಬಲವನ್ನು ಹೆಚ್ಚಿಸುವ ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಅವರೆಲ್ಲರನ್ನೂ ನಾನು ಅಭಿನಂದಿಸುತ್ತೇನೆ ಎಂದು ಮುರ್ಮು ಅವರು ಹೇಳಿದರು.

ಭಾರತ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅನೇಕ ಮೈಲುಗಲ್ಲುಗಳನ್ನು ನೆಟ್ಟಿದೆ. ಈ ಅನ್ವೇಷಣೆಯಲ್ಲಿ ಪಾಲ್ಗೊಳ್ಳಲು ಖಾಸಗಿಯವರಿಗೂ ಅವಕಾಶ ಕಲ್ಪಿಸಲಾಗುತ್ತದೆ. ಗಗನಯಾನ ಪ್ರೋಗ್ರಾಮ್ ಮೂಲಕ ಭಾರತವು ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ರಾಷ್ಟ್ರಪತಿಗಳು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!