ದಿಗಂತ ಡಿಜಿಟಲ್ ಡೆಸ್ಕ್:
ಒಲಿಂಪಿಕ್ ಚಿನ್ನದ ಪದಕ ವಿಜೇತ ಕ್ರೀಡಾಳು ನೀರಜ್ ಚೋಪ್ರಾ ಅವರು ಪ್ರತಿಷ್ಠಿತ ಲಾರಿಯಸ್ ಕ್ರೀಡಾ ಪ್ರಶಸ್ತಿಗೆ ನಾಮಕರಣಗೊಂಡಿದ್ದಾರೆ.
ಒಟ್ಟು ಆರು ಮಂದಿ ಕ್ರೀಡಾಳುಗಳನ್ನು ನಾಮಕರಣ ಮಾಡಲಾಗಿದ್ದು ಅಂತಿಮವಾಗಿ ಒಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ.
ನಾಮಕರಣಗೊಂಡ ಇತರ ಐವರೆಂದರೆ ಆಸ್ಟ್ರೇಲಿಯಾದ ಓಟಗಾರ ಡೇನಿಲ್ ಮೆಡ್ವಡೆವ್, ಬ್ರಿಟಿಷ್ ಟೆನಿಸ್ ಆಟಗಾರ್ತಿ ಎಮ್ಮಾ ರಾಡುಕಾನು, ಫುಟ್ಬಾಲ್ ಆಟಗಾರ ಪೆಡ್ರಿ , ವೆನೆಜುವೆಲಾದ ಕ್ರೀಡಾಳು ಯುಲಿಮಾರ್ ರೋಜಾಸ್ ಮತ್ತು ಆಸ್ಟ್ರೇಲಿಯಾದ ಈಜುಗಾರ ಅರಿಯರ್ನ್ ಟಿಟ್ಮಸ್.