Thursday, March 30, 2023

Latest Posts

KITCHEN TIPS| ಹಸಿ ಮೆಣಸಿನಕಾಯಿ 1 ತಿಂಗಳಾದರೂ ಒಣಗದಂತಿರಲು ಈ ಟ್ರಿಕ್ ಅನುಸರಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಲ್ಯ, ಚಟ್ನಿ, ಸಾಂಬಾರ್‌, ಪುಲಾವ್‌ ಯಾವುದೇ ರೀತಿಯ ಖಾದ್ಯ ಇರಬಹುದು ಖಾರ ಇಲ್ಲದೆ ಪೂರ್ತಿಯಾಗೋದೇ ಇಲ್ಲ. ಅದರಲ್ಲೂ ಹಸಿ ಮೆಣಸಿನಕಾಯಿ ಪ್ರಮುಖ ಪಾತ್ರ ವಹಿಸುತ್ತದೆ. ನಾಲಿಗೆಗೆ ಖಾರವಾಗಿದ್ದರೂ, ಈ ಮೆಣಸಿನಕಾಯಿ ಇಲ್ಲದಿದ್ದರೆ ಭೋಜನ ತಯಾರಾಗೋದೆ ಕಷ್ಟ. ಬೇಕಾದ ತರಕಾರಿಗಳೊಂದಿಗೆ ಹಸಿ ಮೆಣಸಿನಕಾಯಿಯನ್ನೂ ಖರೀದಿಸುತ್ತೇವೆ.

ಆದರೆ ಅದನ್ನು ತಾಜಾವಾಗಿ ಇಡುವುದು ಹೇಗೆ ಎಂಬುದು ದೊಡ್ಡ ಸವಾಲು. ಬೇಸಿಗೆಯಲ್ಲಂತೂ ಹಸಿಮೆಣಸಿನಕಾಯಿ ಬಹುಬೇಗ ಒಣಗಿ ರುಚಿಯೂ ಬದಲಾಗುತ್ತದೆ. ಮೆಣಸಿನಕಾಯಿ ತಿಂಗಳುಗಟ್ಟಲೆ ಕೆಡದೆ ಶೇಖರಿಸಿಡಬಹುದು.

ಜಿಪ್ ಬ್ಯಾಗ್ ಬಳಸಿ: ಜಿಪ್ ಲಾಕ್ ಬ್ಯಾಗ್‌ನಲ್ಲಿ ಇರಿಸಿ ರೆಫ್ರಿಜರೇಟರ್ನಲ್ಲಿ ಇರಿಸಿ.

ನೀರಿನಲ್ಲಿ ಒಂದು ಚಮಚ ವಿನೆಗರ್ ಸೇರಿಸಿ ಮತ್ತು ಅದರಲ್ಲಿ ಹಸಿರು ಮೆಣಸಿನಕಾಯಿಯನ್ನು ಸೇರಿಸಿ. ಸ್ವಲ್ಪ ಸಮಯದ ನಂತರ ಮೆಣಸಿನಕಾಯಿಯನ್ನು ಶುದ್ಧ ನೀರಿನಿಂದ ತೊಳೆದು ಒಣಗಿಸಿ. ಹಸಿರು ಮೆಣಸಿನಕಾಯಿ ಚೆನ್ನಾಗಿ ಒಣಗಿದ ನಂತರ ಕಾಂಡಗಳನ್ನು ತೆಗೆಯಬೇಕು. ಹಾಗೆಯೇ ಕೆಂಪು ಮತ್ತು ಹಾಳಾದ ಹಸಿರು ಮೆಣಸಿನಕಾಯಿಗಳನ್ನು ಪ್ರತ್ಯೇಕಿಸಿ. ಈ ಮೆಣಸಿನಕಾಯಿಗಳನ್ನು ಗಾಳಿಯಾಡದ ಡಬ್ಬದಲ್ಲಿ ಪ್ಯಾಕ್ ಮಾಡಿದರೆ ಒಂದು ತಿಂಗಳವರೆಗೆ ಬಳಸಬಹುದು.

ಕಾಂಡವನ್ನು ತೆಗೆದಿಟ್ಟು, ಕೊಳೆತ ಮೆಣಸಿನಕಾಯಿಯನ್ನು ಬೇರ್ಪಡಿಸಿ ಬಟ್ಟೆ, ಅಥವಾ ಗೋಣಿಚೀಲ ನೆನೆಸಿ ಅದರಲ್ಲಿ ಇಟ್ಟರೂ ಕೆಡುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!