ಇಂದಿನಿಂದ ಕೆಲ ಅಗತ್ಯ ವಸ್ತುಗಳ ಬೆಲೆ ಏರಿಕೆ: ಯಾವುದು ತುಟ್ಟಿ, ಯಾವುದು ಅಗ್ಗ?

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದಿದ್ದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಡಬ್ಬಿ ಅಥವಾ ಪ್ಯಾಕ್ ಮತ್ತು ಲೇಬಲ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸುವ ಬಗ್ಗೆ ನಿರ್ಧರಿಸಲಾಗಿದ್ದು, ಅದು ಇಂದಿನಿಂದ ಜಾರಿಗೆ ಬರುತ್ತಿದೆ.
ಹಲವು ಆಹಾರ ಪದಾರ್ಥ ಸಹಿತ ವಸ್ತುಗಳ ಬೆಲೆ ಇಂದಿನಿಂದಲೇ ಏರಿಕೆಯಾಗಿದೆ.
ತುಟ್ಟಿ ಯಾವ್ಯಾವುದು?
ಮೀನು, ಮೊಸರು, ಪನೀರ್, ಲಸ್ಸಿ, ಜೇನುತುಪ್ಪ, ಅಕ್ಕಿ, ಗೋಧಿ, ರೈಸ್, ಬಾರ್ಲಿ, ಓಟ್ಸ್, ಒಣ ಸೋಯಾಬೀನ್, ಬಟಾಣಿ ಮುಂತಾದ ಉತ್ಪನ್ನಗಳ ಮೇಲೆ ಶೇ.5 ರಷ್ಟು ಜಿಎಸ್‌ಟಿ ಅನ್ವಯವಾಗಲಿದೆ.
ಇನ್ನು 5,೦೦೦ ರೂ.ಗಿಂತ ಹೆಚ್ಚು ಬಾಡಿಗೆ ಇರುವ ಆಸ್ಪತ್ರೆ ಕೊಠಡಿಗಳ ಮೇಲೆಯೂ ಜಿಎಸ್‌ಟಿ ಪಾವತಿ ಕಡ್ಡಾಯವಾಗಿದ್ದು, ದಿನಕ್ಕೆ 1,೦೦೦ ರೂ.ಗಿಂತ ಕಡಿಮೆ ಬಾಡಿಗೆ ಇರುವ ಹೋಟೆಲ್ ಕೊಠಡಿಗಳ ಮೇಲೆ ಶೇ. 12ರ ದರದಲ್ಲಿ ತೆರಿಗೆ ವಿಧಿಸಲಾಗಿದೆ.
ಪ್ರಿಂಟಿಂಗ್, ಡ್ರಾಯಿಂಗ್ ಇಂಕ್, ಚಾಕುಗಳು, ಪೇಪರ್ ಕತ್ತರಿಸುವ ಚಾಕುಗಳು ಮತ್ತು ಪೆನ್ಸಿಲ್ ಶಾರ್ಪನರ್‌ಗಳು, ಎಲ್‌ಇಡಿ ಬಲ್ಬ್‌ಗಳು, ಡ್ರಾಯಿಂಗ್ ಮತ್ತು ಮಾರ್ಕಿಂಗ್ ಉತ್ಪನ್ನಗಳ ಮೇಲಿನ ತೆರಿಗೆ ದರಗಳನ್ನು ಶೇ.18ಕ್ಕೆ ಹೆಚ್ಚಿಸಲಾಗಿದೆ. ಸೋಲಾರ್ ವಾಟರ್ ಹೀಟರ್‌ಗಳ ಮೇಲೂ ಶೇ. 12ರಷ್ಟು ಜಿಎಸ್‌ಟಿ ವಿಧಿಸಲಾಗಿದೆ.
ಟೆಟ್ರಾ ಪ್ಯಾಕ್, ಬ್ಯಾಂಕ್ ಚೆಕ್‌ಗಳ ಮೇಲೆ ಶೇ.18, ಅಟ್ಲಾಸ್ ಸೇರಿದಂತೆ ಇತರೆ ನಕ್ಷೆ, ಚಾರ್ಟ್‌ಗಳ ಮೇಲೆ ಶೇ.12, ರಸ್ತೆ, ಸೇತುವೆ, ರೈಲ್ವೆ, ಮೆಟ್ರೊ, ತ್ಯಾಜ್ಯ ಸಂಸ್ಕರಣಾ ಘಟಕದ ಕಾಮಗಾರಿಗಳ ಗುತ್ತಿಗೆಗಳ ಮೇಲೆ ಶೇ. 18ರಷ್ಟು ಜಿಎಸ್‌ಟಿ ಬರೆ ಬೀಳಲಿದೆ.
ಯಾವುದು ಅಗ್ಗ?
ರೋಪ್‌ವೇ, ಕೆಲವು ಶಸ್ತ್ರಚಿಕಿತ್ಸಾ ಉಪಕರಣಗಳು, ಸರಕು, ಪ್ರಯಾಣಿಕರ ಸಾಗಣೆಯ ಮೇಲಿನ ತೆರಿಗೆ ದರವನ್ನು ಶೇ. 12ರಿಂದ 5ಕ್ಕೆ ಇಳಿಸಲಾಗಿದೆ. ಬ್ಯಾಟರಿ ಇರುವ, ಇಲ್ಲದ ಎಲೆಕ್ಟ್ರಿಕ್ ವಾಹನಗಳ ಮೇಲಿನ ರಿಯಾಯಿತಿ ಶೇ. 5ರಷ್ಟು ಜಿಎಸ್‌ಟಿ ಮುಂದುವರೆಯಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!