ಶಿವರಾತ್ರಿ ಹಬ್ಬಕ್ಕೂ ಬೆಲೆ ಏರಿಕೆ ಬಿಸಿ, ಹೂವು, ಹಣ್ಣಿನ ಬೆಲೆ ಗಗನಕ್ಕೆ! ರೇಟ್‌ ಎಷ್ಟಿದೆ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಿವರಾತ್ರಿ ಹಬ್ಬದ ಹಿನ್ನೆಲೆ ರಾಜ್ಯಾದ್ಯಂತ ಹೂವು, ಹಣ್ಣಿನ ಬೆಲೆ ಹೆಚ್ಚಾಗಿದೆ. ಹಬ್ಬಗಳ ಸಮಯದಲ್ಲಿ ಹೂವು ಹಣ್ಣುಗಳ ಬೆಲೆ ಏರಿಕೆ ಸಾಮಾನ್ಯವಾಗಿದೆ. ಅಂತೆಯೇ ಈ ಬಾರಿ ಕೂಡ ರೇಟ್‌ ಹೆಚ್ಚಾಗಿದ್ದು, ಮಿಡಲ್‌ ಕ್ಲಾಸ್‌ ಜನರಿಗೆ ಕಣ್ಣೀರು ಬರುವಂತಾಗಿದೆ.

ಬಿಲ್ವಪತ್ರೆ ಮಾತ್ರವಲ್ಲದೆ, ಶಿವರಾತ್ರಿ ಹಬ್ಬದಲ್ಲಿ, ಶಿವನ ಪೂಜೆಗೆ ಬೇಕಾದ ಹಣ್ಣು, ವಿಭೂತಿ, ಹೂವು, ಹಣ್ಣುಗಳ ಖರೀದಿ ಯ ಭರಾಟೆಯೂ ಜೋರಾಗಿದೆ. ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನ ಕೆ.ಆರ್‌. ಮಾರುಕಟ್ಟೆ, ಗಾಂಧಿಬಜಾರ್‌, ಮಲ್ಲೇಶ್ವರಂನಲ್ಲಿನ ಮಾರುಕಟ್ಟೆಗಳಲ್ಲಿ ನಿನ್ನೆ ಸಂಜೆಯಿಂದಲೇ ಭರ್ಜರಿ ವ್ಯಾಪಾರ ನಡೆಯುತ್ತಿದೆ.

ಶಿವರಾತ್ರಿ ಹಬ್ಬದಲ್ಲಿಯೂ ಸಹ ಹೂ-ಹಣ್ಣುಗಳ ಬೆಲೆ ಗಗನಕ್ಕೇರಿದೆ. ವಾಸ್ತವವಾಗಿ, ಹಬ್ಬದಲ್ಲಿ ಹೆಚ್ಚಾಗಿ ಜನರು ಭಾರೀ ಪ್ರಮಾಣದಲ್ಲಿ ಹೂವು ಖರೀದಿಸುತ್ತಾರೆ. ಅದರಲ್ಲೂ ಶಿವನಿಗೆ ಪ್ರಿಯವಾದ ಹೂ ಹಣ್ಣುಗಳನ್ನು ಶಿವನ ಪೂಜೆಯಲ್ಲಿ ಇಡುವ ವಾಡಿಕೆ ಇದೆ. ಒಂದೆಡೆ ದಿನಬಳಕೆ ವಸ್ತುಗಳ ಬೆಲೆ ಏರಿಕೆಯಾದ್ರೆ ಮತ್ತೊಂದೆಡೆ ಈ ಹಬ್ಬದ ದಿನಗಳಲ್ಲಿ ಹೂ-ಹಣ್ಣಿನ ದರ ಗಗನಕ್ಕೇರಿದೆ. ಮಾಮೂಲಿ ದರಕ್ಕಿಂತ 50-100ರೂಪಾಯಿವರೆಗೂ ರೇಟ್‌ ಹೆಚ್ಚು ಮಾಡಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!