ವಿಮಾನ ಅಪಘಾತದಲ್ಲಿ ರಷ್ಯಾ ಅಧ್ಯಕ್ಷ ವಿರುದ್ಧ ದಂಗೆ ಎದ್ದಿದ್ದ ವ್ಯಾಗ್ನರ್‌ ಪಡೆ ಮುಖ್ಯಸ್ಥ ಪ್ರಿಗೋಜಿನ್‌ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಷ್ಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಖಾಸಗಿ ಸೇನೆ ವ್ಯಾಗ್ನರ್ ಪಡೆಯ ಮುಖ್ಯಸ್ಥ ಯೆವೆಗೆನಿ ಪ್ರಿಗೋಜಿನ್‌ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ.

ಈ ಸುದ್ದಿ ಕೆಳೆದರಡು ದಿನದಿಂದ ಭಾರಿ ಸಂಚಲನ ಸೃಷ್ಟಿಸಿತ್ತು. ಇದೀಗ ರಷ್ಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಜೆನೆಟಿಕ್ ಪರೀಕ್ಷೆ ಮಾಡಿದೆ. ಬಳಿಕ ವ್ಯಾಗ್ನರ್ ಪಡೆ ಮುಖ್ಯಸ್ಥ ಪ್ರಿಗೋಜಿನ್ ಮೃತಪಟ್ಟಿರುವುದನ್ನು ಖಚಿತಪಡಿಸಿದೆ.

ಯೆವೆಗೆನಿ ಪ್ರಿಗೋಜಿನ್‌ ಪ್ರಯಾಣಿಸುತ್ತಿದ್ದ ವಿಮಾನ ಅನುಮಾನಾಸ್ಪದ ರೀತಿಯಲ್ಲಿ ರಷ್ಯಾದಲ್ಲಿ ಪತನಗೊಂಡಿತ್ತು. ಪ್ರಿಗೋಜಿನ್‌ ಜತೆಗೆ ವಿಮಾನದಲ್ಲಿದ್ದ ಎಲ್ಲ 10 ಪ್ರಯಾಣಿಕರೂ ಸಾವಿಗೀಡಾಗಿದ್ದರು.

ವಿಮಾನ ಪತನಕ್ಕೆ ಟ್ರಾಫಿಕ್ ಉಲ್ಲಂಘನೆ ಕಾರಣವಾಗಿರಬಹುದು ಅನ್ನೋ ಮಾಹಿತಿಯನ್ನು ತಿಳಿಸಿದೆ. ಆದರೆ ಈ ಪತನದ ಹಿಂದೆ ರಷ್ಯಾ ಅಧ್ಯಕ್ಷ ಪುಟಿನ್ ಕೈವಾಡವಿದೆ ಅನ್ನೋ ಮಾತುಗಳು ಬಲವಾಗುತ್ತಿದೆ.ಈ ಘಟನೆ ಕುರಿತು ರಷ್ಯಾ ತನಿಖೆ ನಡೆಸುತ್ತಿದೆ.

ಮಾಸ್ಕೋದಿಂದ ಸೇಂಟ್‌ ಪೀಟ​ರ್ಸ್‌ಬರ್ಗ್‌ಗೆ ಪ್ರಿಗೋಜಿನ್‌ ಇದ್ದ ಎಂಬ್ರೇಯರ್‌ ವಿಮಾನ ಪ್ರಯಾಣ ಬೆಳೆಸಿತ್ತು. 28 ಸಾವಿರ ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನ ಏಕಾಏಕಿ ಕುಸಿತ ಕಂಡಿದೆ. ಕೇವಲ 30 ಸೆಕೆಂಡ್‌ಗಳಲ್ಲಿ 8000 ಅಡಿ ಕುಸಿದು ನೋಡನೋಡುತ್ತಿದ್ದಂತೆ ಪತನವಾಗಿ ಬೆಂಕಿ ಹೊತ್ತಿಕೊಂಡಿತು.ಈ ವಿಮಾನದಲ್ಲಿದ್ದ ಪ್ರಿಗೋಜಿನ್ ಸೇರಿ ಎಲ್ಲಾ 10 ಮಂದಿ ಮೃತಪಟ್ಟಿದ್ದರು.

ರಷ್ಯಾ ಅಧ್ಯಕ್ಷರ ವಿರುದ್ಧವೇ ಬಂಡಾಯವೆದ್ದು ಪ್ರತೀಕಾರ ತೀರಿಸಲು ಮುಂದಾಗಿದ್ದ ಪ್ರಿಗೋಜಿನ್ ಇದೀಗ ದುರಂತ ಅಂತ್ಯಕಂಡಿದ್ದಾರೆ.

ವ್ಯಾಗ್ನರ್ ಪಡೆಯ ಮುಖ್ಯಸ್ಥನೇ ದುರಂತ ಅಂತ್ಯಕಂಡಿರುವ ಬೆನ್ನಲ್ಲೇ ವ್ಯಾಗ್ನರ್ ಪಡೆ ಅತಂತ್ರವಾಗಿದೆ. ಮುಂದಿನ ನಾಯಕ ಯಾರು ಅನ್ನೋ ಕುರಿತು ಗೊಂದಲ ಹೆಚ್ಚಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!