Friday, September 29, 2023

Latest Posts

ರೋಗಿಯ ಸಂಬಂಧಿಕರ ಜೊತೆಗೆ ವೈದ್ಯರ ಗೂಂಡಾವರ್ತನೆ

ಹೊಸದಿಗಂತ ವರದಿ, ಗದಗ:

ಯಾರಿಗೆ ಫೋನ್ ಮಾಡ್ತಿಯಾ ಮಾಡು.. ಮಾತಾಡ್ತೀನಿ, ನನ್ನ ಅಡ್ರೆಸ್ ಬರೆದುಕೊ.. ಏನ್ ಮಾಡ್ತಿ ಮಾಡು.. ಫೇಸ್‌ಬುಕ್ ಲೈವ್ ಮಾಡು ಎಂದು ಶರ್ಟ್ ಗುಂಡಿ ಬಿಚ್ಚಿ ರೋಗಿಗಗಳ ಸಂಬಂಧಿಕರಿಗೆ ಅವಾಜ್ ಹಾಕಿ, ಹುಚ್ಚಾಟದ ವರ್ತನೆ ಮಾಡಿದ ಜಿಮ್ಸ್ ವೈದ್ಯನ ಪುಂಡಾಟ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ನಗರದ ಜಿಮ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಗೌತಮ ಅವರು ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುಸ್ತಾಕ್ ಅಲಿ ಎಂಬಾತನಿಗೆ ಅವಾಜ್ ಹಾಕಿದ್ದಾರೆ. ಕಳೆದ ಕೆಲ ದಿನದ ಹಿಂದೆ ಮುಸ್ತಾಕ ಅಲಿ ತನ್ನ ಹೆಂಡತಿಯ ಹೆರಿಗೆಗಾಗಿ ಜಿಲ್ಲಾಸ್ಪತ್ರೆಗೆ ಆಗಮಿಸಿದ್ದರು. ನವಜಾತ ಶಿಶು, ಬಾಣಂತಿ ಹಾರೈಕೆ ಸರಿಯಾಗದಿದ್ದರೆ ಸಚಿವರಿಗೆ ಫೋನ್ ಮಾಡಿ ದೂರು ಹೇಳುವದಾಗಿ ವೈದ್ಯರಿಗೆ ಹೇಳಿದ್ದರು. ಇದರಿಂದ ಕೆರಳಿದ ಡಾ. ಗೌತಮ ಅವರು ಯಾರಿಗೆ ಪೋನ್ ಮಾಡ್ತಿಯಾ ಮಾಡು ಅಂತಾ ಗಲಾಟೆ ತೆಗೆದು,
ರೋಗಿಯ ಸಂಬಂಧಿಕರೊಂದಿಗೆ ಜನರ ಎದುರೆ ಅತೀರೇಕದ ವರ್ತನೆ ಮಾಡಿದ್ದಾರೆ ಎನ್ನಲಾಗಿದೆ. ವೈದ್ಯರ ಹುಚ್ಚಾಟದ ವರ್ತನೆಯ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ವೈದ್ಯಕೀಯ ಸಚಿವರಾದ ಶರಣಪ್ರಕಾಶ ಪಾಟೀಲ ಅವರು ಮಾತನಾಡಿ, ಈ ಘಟನೆಯು ನನ್ನ ಗಮನಕ್ಕೆ ಬಂದಿಲ್ಲ, ಘಟನೆ ಬಗ್ಗೆ ಮಾಹಿತಿ ಪಡೆಯುತ್ತೆನೆ.
ರೋಗಿಗಳ ಜೊತೆಗೆ ಈ ರೀತಿಯ ವರ್ತನೆ ಸರಿಯಲ್ಲ, ಎಲ್ಲರಿಗೂ ಸೂಚನೆ ಕೊಡುತ್ತೆನೆ. ನಮ್ಮ ಆಸ್ಪತ್ರೆಗೆ ಬರುವವರು ಹೆಚ್ಚಾಗಿ ಬಡವರು ಇರುತ್ತಾರೆ.
ಅವರ ಜೊತೆ ಒಳ್ಳೆಯ ವರ್ತನೆ ತೋರಬೇಕು ಮುಂದಿನ ದಿನಗಳಲ್ಲಿ ಇಂತಹ ಘಟನೆಯಾಗದಂತೆ ನೋಡಿಕೊಳ್ಳುತ್ತೆವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!