Friday, March 24, 2023

Latest Posts

‘ಬಾರಿಸು ಕನ್ನಡ ಡಿಂಡಿಮವ’ ಸಾಂಸ್ಕೃತಿಕ ಉತ್ಸವದಲ್ಲಿ ಪ್ರಧಾನಿ: ಕನ್ನಡದಲ್ಲೇ ಟ್ವೀಟ್ ಮಾಡಿ ಖುಷಿ ಹಂಚಿಕೊಂಡ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯ ಟಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆಯಲಿರುವ ದೆಹಲಿ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಸಂಜೆ 5 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ.

ಈ ಕುರಿತು ಕನ್ನಡದಲ್ಲೇ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ, “ಅಮೃತ ಮಹೋತ್ಸವದ ಅಂಗವಾಗಿ ದೆಹಲಿ ಕರ್ನಾಟಕ ಸಂಘ ದೆಹಲಿಯಲ್ಲಿ ಆಯೋಜಿಸಿರುವ ‘ಬಾರಿಸು ಕನ್ನಡ ಡಿಂಡಿಮವ’ ಸಾಂಸ್ಕೃತಿಕ ಉತ್ಸವದಲ್ಲಿ ಇಂದು ಸಂಜೆ 5 ಗಂಟೆಗೆ ಪಾಲ್ಗೊಳ್ಳಲಿದ್ದೇನೆ. ಈ ಕಾರ್ಯಕ್ರಮವು ಕರ್ನಾಟಕದ ಅದ್ಭುತ ಸಂಸ್ಕೃತಿಯ ಆಚರಣೆಯಾಗಿದೆ ಮತ್ತು ರಾಜ್ಯದ ನೃತ್ಯ, ಸಂಗೀತ ಮತ್ತು ನಾಟಕದಂತಹ ಪ್ರಾಕಾರಗಳನ್ನು ಪ್ರದರ್ಶಿಸುತ್ತದೆ” ಖುಷಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!