ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್‌-2 ಉದ್ಘಾಟಿಸಿದ ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈಟೆಕ್‌ ತಂತ್ರಜ್ಞಾನ ಹೊಂದಿರುವ ಟರ್ಮಿನಲ್‌-2 ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಮಾಜಿ ಸಿಎಂ ಯಡಿಯೂರಪ್ಪ ಉಪಸ್ಥಿತಿದ್ದರು.

ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ಟರ್ಮಿನಲ್‌-2 ವೀಕ್ಷಿಸಿದರು. ಈ ವೇಳೆ ಟರ್ಮಿನಲ್‌ ನಿರ್ಮಾಣ ಅದಕ್ಕೆ ತಗುಲಿರುವ ವೆಚ್ಚ, ವಿನ್ಯಾಸದ ಬಗ್ಗೆ ಪ್ರಧಾನಿ ಮೋದಿಯವರಿಗೆ ವಿವರಿಸಲಾಯಿತು.

ಟರ್ಮಿನಲ್‌-2 ವಿಶೇಷತೆ

  • ಏಷ್ಯಾದಲ್ಲೇ ಮೊದಲ ಗಾರ್ಡನ್‌ ಟರ್ಮಿನಲ್‌-2
  • 5,000ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಟರ್ಮಿನಲ್‌-2
  • 2.55ಲಕ್ಷ ಚದರ ಮೀಟರ್‌ ವಿಸ್ತೀರ್ಣದಲ್ಲಿ ಟರ್ಮಿನಲ್‌ ನಿರ್ಮಾಣ
  • ವಾರ್ಷಿಕ 2.5ಕೋಟಿ ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ
  • ಹೈಟೆಕ್‌ ತಂತ್ರಜ್ಞಾನ ಹಾಗೂ ಹಚ್ಚ ಹಸಿರಿನ ಟರ್ಮಿನಲ್‌ ನಿರ್ಮಾಣ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!