ಕೆನಡಾ ಚುನಾವಣೆಯಲ್ಲಿ ಪ್ರಧಾನಿ ಜಸ್ಟಿನ್‌ ಟ್ರುಡೋ ಸೋಲು ಖಚಿತ: ಎಲಾನ್‌ ಮಸ್ಕ್‌ ಭವಿಷ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮುಂದಿನ ವರ್ಷದ ಕೆನಡಾ ಚುನಾವಣೆಯಲ್ಲಿ ಪ್ರಧಾನಿ ಜಸ್ಟಿನ್‌ ಟ್ರುಡೋ ಸೋಲು ಖಚಿತ ಎಂದು ಟೆಸ್ಲಾ ಸಂಸ್ಥಾಪಕ ಎಲಾನ್‌ ಮಸ್ಕ್‌ ಭವಿಷ್ಯ ನುಡಿದಿದ್ದಾರೆ.

ಎಕ್ಸ್‌ನಲ್ಲಿ ಒಬ್ಬರು ಜರ್ಮನ್‌ನಲ್ಲಿರುವ ಸಮಾಜವಾದಿ ಸರ್ಕಾರವು ಕುಸಿದಿದೆ ಮತ್ತು ಈಗ ಕ್ಷಿಪ್ರ ಚುನಾವಣೆಯ ಕುರಿತು ಮಾತುಕತೆಗಳು ನಡೆಯುತ್ತಿವೆ ಎಂದು ಪೋಸ್ಟ್‌ ಮಾಡಿದ್ದರು.

ಈ ಪೋಸ್ಟ್‌ ಅನ್ನು ಮಸ್ಕ್‌ ಅವರಿಗೆ ಟ್ಯಾಗ್‌ ಮಾಡಿದ ಕೆನಡಾದ ಬಳಕೆದಾರರು ಟ್ರುಡೊವನ್ನು ತೊಡೆದುಹಾಕಲು ನಮಗೆ ಕೆನಡಾದಲ್ಲಿ ನಿಮ್ಮ ಸಹಾಯದ ಅಗತ್ಯವಿದೆ ಎಂದು ಬರೆದಿದ್ದರು. ಇದಕ್ಕೆ ಮಸ್ಕ್‌ ಮುಂದಿನ ಚುನಾವಣೆಯಲ್ಲಿ ಅವರು ಹೋಗುತ್ತಾರೆ ಎಂದು ಕಮೆಂಟ್‌ ಮಾಡಿದ್ದಾರೆ.

ಮುಂದಿನ ವರ್ಷದ ಅಕ್ಟೋಬರ್‌ನಲ್ಲಿ ಕೆನಡಾದಲ್ಲಿ ಚುನಾವಣೆ ನಡೆಯಲಿದೆ. 2015 ರಿಂದ ಜಸ್ಟಿನ್‌ ಟ್ರುಡೋ ಪ್ರಧಾನಿಯಾಗಿ ಅಧಿಕಾರದಲ್ಲಿದ್ದಾರೆ.

ಖಲಿಸ್ತಾನ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದರು. ಆದರೆ ಅ.16 ರಂದು ನಾವು ಯಾವುದೇ ಪುರಾವೆಯನ್ನು ಭಾರತಕ್ಕೆ ನೀಡಿಲ್ಲ ಎಂದು ಕೆ ಜಸ್ಟಿನ್‌ ಟ್ರುಡೋ ಅಧಿಕೃತವಾಗಿ ಒಪ್ಪಿಕೊಳ್ಳುವ ಮೂಲಕ ಸೆಲ್ಫ್‌ ಗೋಲ್‌ ಹೊಡೆದಿದ್ದರು. ಇದರಿಂದಾಗಿ ಕೆನಡಾಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸುವಂತಾಗಿತ್ತು. ಖಲಿಸ್ತಾನಿ ಪರ ಟ್ರುಡೋ ಬ್ಯಾಟಿಂಗ್‌ ಮಾಡುತ್ತಿರುವುದಕ್ಕೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿತ್ತು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!