Thursday, October 6, 2022

Latest Posts

ಜನಸಂಘದ ಅವಧಿಯ ಉಡುಪಿ ನಗರಸಭೆಯನ್ನು ಕೊಂಡಾಡಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಗುಜರಾತ್‌ನ ರಾಜಧಾನಿ ಗಾಂಧಿನಗರದಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಮೇಯರ್‌ಗಳ ಸಮ್ಮೇಳನವನ್ನು ವರ್ಚುವಲ್‌ ಆಗಿ ಉದ್ಘಾಟಿಸಿದರು.

ಈ ವೇಳೆ ಮಾತಾಡಿದ ಅವರು , ಜನಸಂಘದ ಅವಧಿಯಲ್ಲಿದ್ದ ಉಡುಪಿ ಪುರಸಭೆಯನ್ನು ಕೊಂಡಾಡಿದ್ದಾರೆ. 1960 ರ ದಶಕದಲ್ಲಿ ಕರ್ನಾಟಕದ ಉಡುಪಿ ಪುರಸಭೆಯು ಜನಸಂಘ ಆಡಳಿತದಲ್ಲಿ ಗೆದ್ದು ಜನ ಮೆಚ್ಚುಗೆಯನ್ನು ಪಡೆದಿತ್ತು. ಅದು ಈಗಲೂ ಬಿಜೆಪಿ ಆಡಳಿತದ ಮೂಲಕ ನಿರಂತರವಾಗಿ ಪ್ರಥಮ ಸ್ಥಾನ ಪಡೆದು ಜನ ಮೆಚ್ಚುಗೆಯನ್ನು ಗಳಿಸಿತ್ತಿದೆ ಅದು ಈಗಲೂ ನಿರಂತರ ನಡೆದುಕೊಂಡು ಬರುತ್ತಿದೆ ಎಂದು ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಒಟ್ಟಾರೆಯಾಗಿ, 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಯರ್‌ಗಳು, ಉಪ ಮೇಯರ್‌ಗಳು ಮತ್ತು ಇತರ ಚುನಾಯಿತ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ತ್ಯಾಜ್ಯ ನಿರ್ವಹಣೆ, ಟ್ರಾಫಿಕ್ ನಿರ್ವಹಣೆ ಮತ್ತು ನೀರು ಜಲಾವೃತವಾಗುವ ವಿಷಯಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಸೂರತ್, ಇಂದೋರ್, ಕಾನ್ಪುರ ಮತ್ತು ಪಣಜಿಯ ಮೇಯರ್‌ಗಳು ತಮ್ಮ ತಮ್ಮ ನಗರಗಳಲ್ಲಿ ತ್ಯಾಜ್ಯ ನಿರ್ವಹಣೆ, ಸ್ವಚ್ಛತೆ ಮತ್ತು ಆದಾಯ ಉತ್ಪಾದನೆ ಸೇರಿದಂತೆ ಕ್ಷೇತ್ರಗಳಲ್ಲಿ ಮಾಡಿದ ಕೆಲಸಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!