ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ನಡೆದ ರೋಜ್ಗಾರ್ ಮೇಳದಲ್ಲಿ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ 50,000ಕ್ಕೂ ಹೆಚ್ಚು ಯುವಕರಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನೇಮಕಾತಿ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ವಿತರಿಸಿದರು.
ನೇಮಕಾತಿ ಪತ್ರ ವಿತರಣೆ ಬಳಿಕ ಪ್ರಧಾನಮಂತ್ರಿ ಮಾತನಾಡಿ, ಹೊಸದಾಗಿ ನೇಮಕಗೊಂಡವರನ್ನು ‘ಅಮೃತ್ ರಕ್ಷಕರು’ ಎಂದು ಕರೆದರು. ಅದಾಗ್ಯೂ ನೇಮಕಾತಿ ಪತ್ರಗಳನ್ನು ಪಡೆದ ಎಲ್ಲರಿಗೂ ಅಭಿನಂದಿಸಿದರು.
ಫಾರ್ಮಾ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ ಮತ್ತು ಇದು ಮುಂಬರುವ ದಿನಗಳಲ್ಲಿ ದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಆಟೋಮೊಬೈಲ್ ಉದ್ಯಮವು ಸಹ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ಎರಡೂ ಕೈಗಾರಿಕೆಗಳು (ಫಾರ್ಮಾ ಮತ್ತು ಆಟೋಮೊಬೈಲ್ ಉದ್ಯಮ) ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲಿವೆ ಎಂದರು.
ಅದೇ ರೀತಿಯಾಗಿ ಪ್ರವಾಸೋದ್ಯಮ ಕ್ಷೇತ್ರವು 2030ರ ವೇಳೆಗೆ ಭಾರತೀಯ ಆರ್ಥಿಕತೆಗೆ 20 ಲಕ್ಷ ಕೋಟಿ ರೂಪಾಯಿಗಳ ಕೊಡುಗೆಯನ್ನು ನೀಡುವ ಸಾಧ್ಯತೆಯಿದೆ. ಯುವಜನರಿಗೆ 13-14 ಕೋಟಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದರು.