ಜೂನ್ 30 ರಿಂದ ಮತ್ತೆ ಕೇಳಿಸಲಿದೆ ಪ್ರಧಾನಿ ಮೋದಿ ‘ಮನ್ ಕಿ ಬಾತ್’!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿಕೊಂಡು ಬರುತ್ತಿದ್ದ ತಮ್ಮ ‘ಮನ್ ಕಿ ಬಾತ್’ ಮಾಸಿಕ ರೇಡಿಯೋ ಕಾರ್ಯಕ್ರಮ ಜೂನ್ 30 ರಿಂದ ಮತ್ತೆ ಪುನರಾರಂಭವಾಗಲಿದೆ.

ಜೂನ್ 30 ರಿಂದ ‘ಮನ್ ಕಿ ಬಾತ್’ ಪುನರಾರಂಭವಾಗಲಿದೆ. ಜನರು ತಮ್ಮ ಆಲೋಚನೆಗಳನ್ನು ಇಲ್ಲಿ ಮುಕ್ತವಾಗಿ ಹಂಚಿಕೊಳ್ಳಬಹುದು ಎಂದು ಪ್ರಧಾನಿ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಚುನಾವಣೆಗಳ ಕಾರಣದಿಂದಾಗಿ ಕೆಲವು ತಿಂಗಳ ಅಂತರದ ನಂತರ ಮನ್ ಕಿ ಬಾತ್ ಮತ್ತೆ ಆರಂಭವಾಗುತ್ತಿದೆ ಎಂದು ಹಂಚಿಕೊಳ್ಳಲು ಸಂತೋಷವಾಗುತ್ತಿದೆ. ಈ ತಿಂಗಳ ಕಾರ್ಯಕ್ರಮವು ಭಾನುವಾರ, 30th ಜೂನ್ ರಂದು ನಡೆಯಲಿದೆ’ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

MyGov ಓಪನ್ ಫೋರಮ್, NaMo ಅಪ್ಲಿಕೇಶನ್‌ ಅಥವಾ ಟೋಲ್ ಫ್ರೀ ಸಂಖ್ಯೆ 1800-11-7800 ಮೂಲಕ ಜನರು ಮುಂಬರುವ ಕಾರ್ಯಕ್ರಮಕ್ಕೆ ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಸಲ್ಲಿಸಬಹುದು. ಮುಂಬರುವ ಸಂಚಿಕೆಯ ಎಲ್ಲಾ ಸಲಹೆಗಳನ್ನು ಈ ತಿಂಗಳ 28 ರವರೆಗೆ ಸ್ವೀಕರಿಸಲಾಗುವುದು ಎಂದು ತಿಳಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!