ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ- ಪ್ರಧಾನಿ ಮೋದಿ ಉದಾಹರಣೆಗಳು ಹೀಗಿದ್ದವು

ಹೊಸದಿಗಂತ ಡಿಜಿಟಲ್ ಡೆಸ್ಕ್

ಕೆಂಪೇಗೌಡರ ಪ್ರತಿಮೆಯನ್ನು ಉದ್ಘಾಟಿಸಿದ ನಂತರ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಮತ್ತು ಕೇಂದ್ರಗಳೆರಡರಲ್ಲೂ ಬಿಜೆಪಿ ಸರ್ಕಾರವಿರುವುದರಿಂದ ಅಭಿವೃದ್ಧಿ ಸಾಕಾರವಾಗುತ್ತಿದೆ ಎಂಬಂಶವನ್ನು ಒತ್ತಿಹೇಳಿದರು. ತಮ್ಮ ಎಂದಿನ ಜನಪ್ರಿಯ ಪದಪುಂಜವಾದ ಡಬಲ್ ಎಂಜಿನ್ ಶಬ್ದವನ್ನು ಭಾಷಣದಲ್ಲಿ ಬಳಸುತ್ತ, ಆ ನಿಟ್ಟಿನಲ್ಲಿ ಅವರು ಕೊಟ್ಟ ಲೆಕ್ಕ ಹೀಗಿದೆ.

“ಕರ್ನಾಟಕದಲ್ಲಿ 8 ಲಕ್ಷ ಮನೆ ನಿರ್ಮಿಸಿ ಕೊಟ್ಟಿದ್ದೇವೆ. ಜಲಜೀವನ್ ಮಿಷನ್ ಅಡಿ ಕರ್ನಾಟಕದಲ್ಲಿ 30 ಲಕ್ಷಕ್ಕೂ ಹೆಚ್ಚು ನಳ್ಳಿ ನೀರು ಸೌಲಭ್ಯ ಕೊಟ್ಟಿದ್ದೇವೆ. ಆಯುಷ್ಮಾನ್ ಯೋಜನೆ ಮೂಲಕ ಕರ್ನಾಟಕದ 30 ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರಯೋಜನ ಸಿಕ್ಕಿದೆ. ಮಹಿಳೆಯರು ಇದರ ಗರಿಷ್ಠ ಪ್ರಯೋಜನ ಪಡೆದಿದ್ದಾರೆ. ಬಡವರು ಸೇರಿ ಎಲ್ಲ ವರ್ಗದ ಜನರಿಗೆ ವಿವಿಧ ಯೋಜನೆಗಳ ಪ್ರಯೋಜನ ಲಭಿಸಿದೆ.”

ಪಿಎಂ ಕಿಸಾನ್ ಸಮ್ಮಾನ್ ಮೂಲಕ ಕರ್ನಾಟಕದಲ್ಲಿ 11 ಸಾವಿರ ಕೋಟಿ ರುಪಾಯಿ ನಿಧಿ ಲಭಿಸಿದೆ. ಏಕ ಭಾರತ ಶ್ರೇಷ್ಠ ಭಾರತ ಚಿಂತನೆ ಜಾರಿಯಾಗಿದೆ. ಅಯೋಧ್ಯೆ, ಕಾಶಿ ಯಾತ್ರೆ, ಶಿರಡಿ ಯಾತ್ರೆ ಸುಖದ ಅನುಭವ ನೀಡುತ್ತಿವೆ ಎಂದಿದ್ದಾರೆ ಪ್ರಧಾನಿ ಮೋದಿ.

“ಜಗತ್ತಿನಲ್ಲಿ ಭಾರತದ ಬಗ್ಗೆ ಗೌರವಾದರ ಹೆಚ್ಚಾಗಿದೆ. ಇದರ ಪ್ರಯೋಜನ ಕರ್ನಾಟಕಕ್ಕೂ ಲಭಿಸುತ್ತಿದೆ. ಎಫ್‍ಡಿಐ ಹೂಡಿಕೆ ಪ್ರಮಾಣವು ಕೇವಲ ಐಟಿಗೆ ಸೀಮಿತವಾಗಿಲ್ಲ. ಬಯೋ ಟೆಕ್ನಾಲಜಿ, ರಕ್ಷಣಾ ಕ್ಷೇತ್ರದಲ್ಲೂ ಹೂಡಿಕೆ ಹೆಚ್ಚಾಗಿದೆ ಎಂದು ಪ್ರಶಂಸಿಸಿದರು.
ಹೆಲಿಕಾಪ್ಟರ್, ಐಟಿ, ಎಲೆಕ್ಟ್ರಿಕ್ ವಾಹನ ಉತ್ಪಾದನೆ ಸೇರಿ ವಿವಿಧ ಕ್ಷೇತ್ರಗಳಿಗೆ ಕರ್ನಾಟಕದ ಕೊಡುಗೆ ದೊಡ್ಡದು. ಕರ್ನಾಟಕ ಫಾರ್ಚೂನ್ 500 ಕಂಪೆನಿಗಳಲ್ಲಿ ಕರ್ನಾಟಕದ ಪಾಲು ದೊಡ್ಡದಿದೆ. ಕರ್ನಾಟಕ ಡಬಲ್ ಎಂಜಿನ್ ತಾಕತ್ತಿನಿಂದ ಮುಂದೆ ಸಾಗುತ್ತಿದೆ” ಎಂಬುದು ಪ್ರಧಾನಿ ನರೇಂದ್ರ ಮೋದಿಯವರ ಮಾತಿನಲ್ಲಿ ಬಂದ ಪ್ರಮುಖಾಂಶ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!