Saturday, October 1, 2022

Latest Posts

ಸಂಕಷ್ಟಕ್ಕೆ ಮಿಡಿದ ಪ್ರಧಾನಿ ಮೋದಿ: ಧನ್ಯವಾದ ಎಂದರು ಪಾಕ್ ಪ್ರಧಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪಾಕಿಸ್ತಾನದಲ್ಲಿ ಪ್ರವಾಹದಿಂದ ಉಂಟಾದ ಮಾನವ ಮತ್ತು ಆಸ್ತಿಪಾಸ್ತಿ ನಷ್ಟದ ಬಗ್ಗೆ ಕಾಳಜಿ ತೋರಿದ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಬುಧವಾರ ಧನ್ಯವಾದ ಅರ್ಪಿಸಿದ್ದಾರೆ.

ಮಾನ್ಸೂನ್ ಮಳೆಯಿಂದ ಉಂಟಾದ ಪ್ರವಾಹ ಪಾಕಿಸ್ತಾನದಾದ್ಯಂತ ವ್ಯಾಪಕ ಹಾನಿಯನ್ನುಂಟುಮಾಡಿದೆ. 1,100 ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದು, 33 ಮಿಲಿಯನ್ ಅಥವಾ ದೇಶದ ಜನಸಂಖ್ಯೆಯ ಏಳನೇ ಒಂದು ಭಾಗದಷ್ಟು ಜನ ಸ್ಥಳಾಂತರಗೊಂಡಿದ್ದಾರೆ.

ಪ್ರವಾಹದಿಂದ ಉಂಟಾದ ಮಾನವ ಜೀವನ ಮತ್ತು ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ಸಂತಾಪ ಸೂಚಿಸಿದ ಭಾರತೀಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಧನ್ಯವಾದಗಳು. ಪಾಕಿಸ್ತಾನದ ಜನರು ತಾವು ಹೊಂದಿರುವ ವಿಶಿಷ್ಟ ಸಹನಶೀಲ ಗುಣದಿಂದ ಈ ನೈಸರ್ಗಿಕ ವಿಕೋಪದ ವ್ಯತಿರಿಕ್ತ ಪರಿಣಾಮಗಳಿಂದ ಹೊರಬರಲಿದ್ದಾರೆ ಮತ್ತು ಅವರು ತಮ್ಮ ಜೀವನ ಮತ್ತು ಸಮುದಾಯಗಳನ್ನು ಪುನರ್ ನಿರ್ಮಿಸಲಿದ್ದಾರೆ, ಇನ್​ಶಾ ಅಲ್ಲಾಹ್ ಎಂದು ಷರೀಫ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!