ಗೋವಾದಲ್ಲಿ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಗೋವಾದ ಮೊಪಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೊದಲ ಹಂತವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಪ್ರಧಾನಿಯವರು ನವೆಂಬರ್ 2016 ರಲ್ಲಿ ಮೋಪಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಡಿಪಾಯ ಹಾಕಿದ್ದರು. ಇದು ಗೋವಾದ ಎರಡನೇ ವಿಮಾನ ನಿಲ್ದಾಣವಾಗಿದ್ದು, ಮೊದಲನೆಯದು ದಾಬೋಲಿಮ್‌ನಲ್ಲಿದೆ.

ವಿಮಾನ ನಿಲ್ದಾಣವು ಸೌರ ವಿದ್ಯುತ್ ಸ್ಥಾವರ, ಹಸಿರು ಕಟ್ಟಡಗಳು, ರನ್‌ವೇಯಲ್ಲಿ ಎಲ್‌ಇಡಿ ದೀಪಗಳು, ಮಳೆನೀರು ಕೊಯ್ಲು, ಮರುಬಳಕೆ ಸಾಮರ್ಥ್ಯಗಳೊಂದಿಗೆ ಅತ್ಯಾಧುನಿಕ ಕೊಳಚೆನೀರು ಸಂಸ್ಕರಣಾ ಘಟಕ, ಇತರ ಸೌಲಭ್ಯಗಳನ್ನು ಹೊಂದಿದೆ. ವಿಮಾನ ನಿಲ್ದಾಣ ನಿರ್ಮಾಣಕ್ಕೆ 12,870 ಕೋಟಿ ವೆಚ್ಚ ತಗುಲಿದೆ.

ಇದರಲ್ಲಿ 3-ಡಿ ಏಕಶಿಲೆಯ ಪ್ರೀಕಾಸ್ಟ್ ರಚನೆಗಳು, ಸ್ಟೆಬಿಲ್‌ರೋಡ್, ರೋಬೋಮ್ಯಾಟಿಕ್ ಹಾಲೋ ಪ್ರಿಕಾಸ್ಟ್ ಗೋಡೆಗಳು ಮತ್ತು 5 ಜಿ ಹೊಂದಾಣಿಕೆಯ ಐಟಿ ಮೂಲಸೌಕರ್ಯಗಳಂತಹ ಕೆಲವು ಅತ್ಯುತ್ತಮ-ದರ್ಜೆಯ ತಂತ್ರಜ್ಞಾನ ಹೊಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!