ಏಕಕಾಲಕ್ಕೆ ಇಬ್ಬರು ಪತ್ನಿಯರು ಪ್ರೆಗ್ನೆಂಟ್: ಯುಟ್ಯೂಬರ್ ಅರ್ಮಾನ್ ಮಲಿಕ್ ಟ್ರೋಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೆಷನ್ ಕ್ರಿಯೆಟ್ ಮಾಡಿರುವ ಖ್ಯಾತ ಯುಟ್ಯೂಬರ್ ಅರ್ಮಾನ್ ಮಲ್ಲಿಕ್ ಇದೀಗ ತಮ್ಮ ಖಾಸಗಿ ವಿಚಾರದಲ್ಲಿ ಸುದ್ದಿಯಲ್ಲಿದ್ದಾರೆ.

ಅದಕ್ಕೆ ಕಾರಣ ಇನ್ಸ್​​ಟಾಗ್ರಾಂನಲ್ಲಿ ಫೋಟೋವೊಂದನ್ನು ಹಂಚಿಕೊಂಡ ಫೋಟೋಗಳು. ಅಷ್ಟಕ್ಕೂ ಅರ್ಮಾನ್ ಮಲಿಕ್ ಹಂಚಿಕೊಂಡಿರುವ ಫೋಟೋ ತನ್ನ ಪತ್ನಿಯರದ್ದು.

ಯೂಟ್ಯೂಬರ್ ಅರ್ಮಾನ್, ಮಲಿಕ್ ಪಾಯಲ್ ಮಲಿಕ್ ಮತ್ತು ಕೃತಿಕಾ ಮಲಿಕ್ ಎಂಬ ಇಬ್ಬರು ಪತ್ನಿಯರು ಇದೀಗ ಒಟ್ಟೊಟ್ಟಿಗೆ ಗರ್ಭಿಣಿಯಾಗಿದ್ದಾರೆ ಎಂಬ ಇನ್ಸ್​​ಟಾಗ್ರಾಂನಲ್ಲಿ ಪೋಸ್ಟ್ ಮಾಡುವ ಮೂಲಕ ತನ್ನ ಸಂತಸವನ್ನು ಹಂಚಿಕೊಂಡಿದ್ದಾನೆ. ಫೋಟೋ ಪೋಸ್ಟ್​ ಮಾಡಿ ‘ಇದು ನನ್ನ ಕುಟುಂಬ’ ಎಂಬ ಬರೆದುಕೊಂಡಿದ್ದಾನೆ.

ಇದೀಗ ಇಬ್ಬರು ಪತ್ನಿಯರು ಒಟ್ಟೊಟ್ಟಿಗೆ ಗರ್ಭಿಣಿಯರಾಗಿರುವ ವಿಚಾರವನ್ನು ಸಾಕಷ್ಟು ಜನರು ಇದೀಗ ಟ್ರೋಲ್ ಮಾಡುತ್ತಿದ್ದಾರೆ. ಆದರೆ ಕೆಲವೇ ಕೆಲವು ಮಂದಿ ಮಾತ್ರ ತಂದೆಯಾಗುತ್ತಿರುವ ಸಂತಸದಲ್ಲಿರುವ ಅಭಿನಂದನೆ ತಿಳಿಸುತ್ತಿದ್ದಾರೆ.

ವರದಿಯ ಪ್ರಕಾರ, ಅರ್ಮಾನ್ ಮಲಿಕ್ 2011 ರಲ್ಲಿ ಪಾಯಲ್ ಜತೆಗೆ ಮೊದಲು ವಿವಾಹವಾಗಿದ್ದ. ಈಕೆಗೆ ಈಗಾಗಲೇ ಚಿರಾಯು ಎಂಬ ಮಗನಿದ್ದಾನೆ. 2018ರಲ್ಲಿ ತನ್ನ ಪತ್ನಿ ಪಾಯಲ್​ ಸ್ನೇಹಿತೆ ಕೃತಿಕಾ ಎಂಬಾಕೆಯನ್ನು ಅರ್ಮಾನ್ ಮದುವೆಯಾಗಿದ್ದನು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!