ಪ್ರಧಾನಿ ಮೋದಿಯಿಂದ ಬೆಳಗುತ್ತಿದೆ ಭಾರತ: ಕಾಂಗ್ರೆಸ್ ನಾಯಕ ಶಶಿ ತರೂರ್ ಮೆಚ್ಚುಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ನಾಯಕ ಶಶಿ ತರೂರ್ ಆಗೊಮ್ಮೆ ಈಗೊಮ್ಮೆ ಪ್ರಧಾನಿ ಮೋದಿ ಅವರ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಇದೀಗ ಇಂದು ಕೂಡ ಕೊಂಡಾಡಿದ್ದು,ಜಿ20ಯಲ್ಲಿ ಉತ್ತಮ ರಾಜತಾಂತ್ರಿಕತೆ ಹಾಗೂ ಇಸ್ಲಾಮಿಕ್ ರಾಷ್ಟ್ರಗಳ ಜೊತೆ ಉತ್ತಮ ಒಡನಾಟ ಹೆಚ್ಚಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ.

ಇಸ್ಲಾಮಿಕ್ ದೇಶಗಳಿಗೂ ಕೂಡ ಪ್ರಧಾನಿ ಭೇಟಿ ಮಾಡಿ ರಾಜತಾಂತ್ರಿಕ ಸಂಬಂಧವನ್ನು ಉತ್ತಮಗೊಳಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ಶಶಿ ತರೂರ್ ಇದೊಂದು ಅನಕರಣೀಯ ಕ್ರಮ ಎಂದಿದ್ದಾರೆ. ಅಲ್ಲದೇ ಜಿ-20ಯಲ್ಲಿ ಭಾರತದ ತನ್ನದೇ ಹವಾ ಸೃಷ್ಟಿಸಿರುವುದರಲ್ಲಿ ಯಶಸ್ವಿಯಾಗಿರುವ ಮೋದಿ ನೇತೃತ್ವದ ಸರ್ಕಾರವನ್ನು ಮೆಚ್ಚಿದರು.

ಸುದ್ದಿಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದೇಶಾಂಗ ನೀತಿಯಲ್ಲಿ, ಒಟ್ಟಾರೆಯಾಗಿ, ನಾನು ಮೋದಿ ಆಡಳಿತವನ್ನು ಆರಂಭದಲ್ಲಿ ಟೀಕೆ ಮಾಡುತ್ತಿದ್ದೆ. ಆದರೆ ಅವರು ಈಗ ಎಲ್ಲಾ ನೆಲೆಗಳನ್ನು ಸಮಂಜಸವಾಗಿ ಸ್ಪರ್ಶಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ತರೂರ್ ಹೇಳಿದರು.

ನನಗೆ ನೆನಪಿರುವಂತೆ ಮೋದಿಯವರು ಪ್ರಧಾನಿಯಾದ ಆರಂಭದ ವರ್ಷದಲ್ಲಿ ಅವರು 27 ದೇಶಗಳಿಗೆ ಪ್ರಯಾಣ ಬೆಳೆಸಿದರು. ಆದರೆ ಆ 27 ದೇಶಗಳಲ್ಲಿ ಒಂದೇ ಒಂದು ಮುಸ್ಲಿಂ ರಾಷ್ಟ್ರವಿರಲಿಲ್ಲ. ಆ ಬಗ್ಗೆ ನಾನು ಕಾಂಗ್ರೆಸ್ ಸಂಸದನಾಗಿ ಸಂಸತ್‌ನಲ್ಲಿ ಗಲಾಟೆ ಮಾಡಿದ್ದೆ. ಆದರೆ ಇದಾದ ನಂತರ ಅವರು ಇಸ್ಲಾಮಿಕ್ ಜಗತ್ತನ್ನು ತಲುಪಲು ಏನೇಲ್ಲಾ ಕೆಲಸಗಳನ್ನು ಮಾಡಿದ್ದಾರೆಂದು ಹೇಳಲು ನನಗೆ ಖುಷಿಯಾಗುತ್ತಿದೆ. ಇದೊಂದು ಅನುಕರಣೀಯ ನಡೆ ವಾಸ್ತವದಲ್ಲಿ ಅವರು ಕೈಗೊಂಡು ಕ್ರಮಗಳು ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ. ಜಗತ್ತಿನ ದೊಡ್ಡ ಮುಸ್ಲಿಂ ರಾಷ್ಟ್ರಗಳೊಂದಿಗೆ ನಮ್ಮ ಸಂಬಂಧ ಇದಕ್ಕಿಂತ ಉತ್ತಮ ಈ ಹಿಂದೆಂದೂ ಇರಲಿಲ್ಲ. ಈ ವೇಳೆ ನಾನು ಈ ಹಿಂದೆ ಮೋದಿಯವರ ಬಗ್ಗೆ ಮಾಡಿದ್ದ ಟೀಕೆಗಳನ್ನು ಹಿಂಪಡೆಯಲು ಬಯಸುತ್ತೇನೆ ಎಂದು ತರೂರ್ ಮಾತನಾಡಿದ್ದಾರೆ.

ಜಿ20ಯಲ್ಲಿ ಭಾರತ ನಡೆ ಭಾರತವೇ ಬೆಳಗುವಂತೆ ಮಾಡಿದೆ. ಜಗತ್ತು ಇನ್ನೆಂದಿಗೂ ಭಾರತವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ, ಇದರಲ್ಲಿ ನರೇಂದ್ರ ಮೋದಿಯವರ ವಿದೇಶಾಂಗ ನೀತಿಯ ಪ್ರಭಾವವಿದೆ ಎಂದು ತರೂರ್ ಹೇಳಿದರು.

ಇದೇ ವೇಳೆ ಚೀನಾ ಜೊತೆಗಿನ ಸರ್ಕಾರದ ಯೋಜನೆಯ ಬಗ್ಗೆ ಸರ್ಕಾರದ ಕಡೆಯಿಂದ ಸ್ಪಷ್ಟತೆ ಇಲ್ಲ. ಭಾರತದ ವಿರುದ್ಧ ಕತ್ತಿ ಮಸೆಯಲು ಇದು ಚೀನಾಗೆ ಫ್ರೀ ಪಾಸ್ ನೀಡಿದಂತೆ ಎಂದ ತರೂರ್, ಪಾರ್ಲಿಮೆಂಟ್‌ನಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಚೀನಾ ಆಪ್‌ಗಳ (Chinese apps) ಮೇಲಿನ ನಿಷೇಧ ಕೇವಲ ಸಂಕೇತಿಕವಾಗಿದೆಯಷ್ಟೇ ಎಂದು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!